21)ಭೂಮಿಯ ಅತ್ಯಂತ ಪುರಾತನ ಶಿಲೆಗಳನ್ನು ನ್ಯೂಝಿಲೆಂಡಿನ ವಿಕ್ ಮ್ಯಾಕ್-ಗ್ರೆಗರ್ ೧೯೬೬ ಮತ್ತು ೧೯೬೭ರಲ್ಲಿ ಪತ್ತೆ ಮಾಡಿದರು. ಗ್ರೀನ್-ಲ್ಯಾಂಡಿನಲ್ಲಿ ಕೆಲಸ ಮಾಡುತ್ತಿದ್ದಾಗ ಈ ಪುರಾತನ ಶಿಲೆಗಳು ಅವರಿಗೆ ಸಿಕ್ಕಿದವು. ಪರಮಾಣು ಕಾಲನಿರ್ಣಯದ ಪ್ರಕಾರ ಈ ಶಿಲೆಗಳು ೩.೭ರಿಂದ ೨.೯ ಬಿಲಿಯನ್ ವರುಷ ಹಳೆಯವು.

22)ಭೂಮಿಯಲ್ಲಿ ಮನುಷ್ಯರ ಜನಸಂಖ್ಯೆ ಸ್ಫೋಟವಾಗುತ್ತಿದೆ: ೩೧-೧೨-೨೦೨೩ರಂದು ಜನಸಂಖ್ಯೆ ೭೯೧.೭೫ ಕೋಟಿ. ಇದರ ಶೇಕಡಾ ೫೦ ಜನರು ವಾಸ ಮಾಡುತ್ತಿರುವುದು ಕೇವಲ ಈ ನಾಲ್ಕು ದೇಶಗಳಲ್ಲಿ: ಚೀನಾ, ಭಾರತ, ರಷ್ಯಾ ಮತ್ತು ಯು.ಎಸ್.ಎ. ಉಳಿದವರು ಸುಮಾರು ೧೬೦ ದೇಶಗಳಲ್ಲಿ ಬದುಕುತ್ತಿದ್ದಾರೆ. (ಫೋಟೋ: ಮುಂಬೈಯಲ್ಲಿ ಜನಸಾಗರ … ಕೃಪೆ: ಗೆಟ್ಟಿ ಇಮೇಜಸ್)

23)ಭೂಮಿಯ ಅತ್ಯಂತ ಉದ್ದದ ಪರ್ವತಶ್ರೇಣಿ ಯಾರಿಗೂ ಕಾಣಿಸುವುದಿಲ್ಲ ಎನ್ನಬಹುದು. ಯಾಕೆಂದರ ಅದು ಸಾಗರದೊಳಗಿದೆ. ಅದುವೇ ಮಿಡ್-ಅಟ್ಲಾಂಟಿಕ್ ರಿಡ್ಜ್. ಐರ್ಲೆಂಡಿನಿಂದ ಅಂಟಾರ್ಕ್‌ಟಿಕ್ ತನಕ ಅದರ ಉದ್ದ ೧೦,೦೦೦ ಮೈಲುಗಳು. ಆ ಶ್ರೇಣಿಯ ಅತ್ಯಂತ ಎತ್ತರದ ಪರ್ವತ ಶಿಖರದ ಎತ್ತರ ಐದು ಮೈಲು. ಆ ಪರ್ವತಶ್ರೇಣಿಯಲ್ಲಿ ನೀರಿನಿಂದ ಮೇಲಕ್ಕೆ ಕಾಣಿಸುವ ಅತ್ಯಂತ ಎತ್ತರದ ಶಿಖರದ ಎತ್ತರ ಒಂದು ಮೈಲು; ಅದುವೇ ಪಿಕೊ ದ್ವೀಪ.

14)ಭೂಮಿಯಲ್ಲಿ ಅಥವಾ ವಿಶ್ವದಲ್ಲಿ ಎಲ್ಲೇ ಆದರೂ “ಜೀವ" ಇರುವುದಕ್ಕೆ ಒಂದು ಕಾರಣ: ನಕ್ಷತ್ರಪುಂಜಗಳು ಭೂಮಿಯಿಂದ ದೂರಕ್ಕೆ ಸರಿಯುತ್ತಿರುವುದು. ಇದರ ಪರಿಣಾಮವಾಗಿ, ಅವುಗಳಿಂದ ಭೂಮಿಗೆ ಬರುವ ಬೆಳಕು “ಕೆಂಪಾಗುತ್ತಿದೆ" (ಡೊಪ್ಪ್ಲರ್ ಪರಿಣಾಮದಿಂದಾಗಿ) ಮತ್ತು ತನ್ನ ಶಕ್ತಿ ಹಾಗೂ ಉಷ್ಣತೆಯನ್ನು ಕಳೆದುಕೊಳ್ಳುತ್ತಿದೆ. ಇದ್ದಂತೆಯೇ ಇರುವ ಅಥವಾ ಕಿರಿದಾಗುವ ವಿಶ್ವದಲ್ಲಿ, ಅಂತಿಮವಾಗಿ ಎಲ್ಲೆಡೆಗಳಲ್ಲಿಯೂ ಅಧಿಕ ಉಷ್ಣತೆ (ಲಕ್ಷಗಟ್ಟಲೆ ಡಿಗ್ರಿ) ಇರುತ್ತದೆ; ಇದರಿಂದಾಗಿ ಎಲ್ಲಿಯೂ "ಜೀವ" ಇರಲು ಸಾಧ್ಯವೇ ಇಲ್ಲ.

15)ಬಹುಶಃ ಭೂಮಿಯಲ್ಲಿ ಆಮ್ಲಜನಕ-ರಹಿತ ವಾತಾವರಣದಲ್ಲಿ ಜೀವ ಅಭಿವೃದ್ಧಿ ಹೊಂದಿತು. ಈಗಲೂ, ಆಮ್ಲಜನಕ-ರಹಿತ ವಾತಾವರಣದಲ್ಲಿ ಮಾತ್ರ ಜೀವಿಸಬಲ್ಲ ಸೂಕ್ಷ್ಮಜೀವಿಗಳು ಭೂಮಿಯಲ್ಲಿವೆ.

16)ಒಂದು ನೂರು ಮೈಲು ಉದ್ದದ ಮತ್ತು ೧೫,೦೦೦ ಚದರ ಮೈಲು ವಿಸ್ತೀರ್ಣದ ದ್ವೀಪವೊಂದು ಬೃಹತ್ ನದಿ ಅಮೆಜಾನ್ ಸಾಗರ ಸೇರುವಲ್ಲಿಯೇ ಇದೆ. (ಇದರ ವಿಸ್ತೀರ್ಣ ನ್ಯೂಯಾರ್ಕ್ ಪ್ರಾಂತ್ಯದ ಮೂರನೆಯ ಒಂದು ಭಾಗಕ್ಕೆ ಸಮ.) ಮರಾಜೋ ಹೆಸರಿನ ಈ ದ್ವೀಪದಲ್ಲಿ ಜನವಸತಿ ಇಲ್ಲ. ಇದು ಭೂಮಧ್ಯರೇಖೆಯಲ್ಲೇ ಇರುವುದು ವಿಶೇಷ. (ಫೋಟೋ ನೋಡಿ)

17)ಮುಸ್ಸಂಜೆಯಲ್ಲಿ ದಿಗಂತದಲ್ಲಿ ಮುಳುಗುವ ಸೂರ್ಯ ಕೆಂಪಾಗಿ ಕಾಣಿಸುವುದು ಯಾಕೆ? ಯಾಕೆಂದರೆ, ಬೆಳಗ್ಗೆಯ ಗಾಳಿಗೆ ಹೋಲಿಸಿದಾಗ ಸಂಜೆಯ ಗಾಳಿಯಲ್ಲಿ ಧೂಳು ಹೆಚ್ಚಾಗಿರುತ್ತದೆ.

7)ನದಿಗಳ ಹರಿವು ಮತ್ತು ಯುರೇಷ್ಯಾ, ಆಫ್ರಿಕಾ, ಅಮೇರಿಕಾ ಹಾಗೂ ಆಸ್ಟ್ರೇಲಿಯಾಗಳಲ್ಲಿ ಹಿಮದ ಪ್ರಕ್ರಿಯೆಯಿಂದ ಭೂಮಿಯ ಸವಕಳಿ ವರುಷಕ್ಕೆ ಚದರ ಮೈಲಿಗೆ ೩೫೦ ಟನ್ ಎಂದು ಲೆಕ್ಕ ಹಾಕಲಾಗಿದೆ. ಅಂದರೆ ೨೨,೦೦೦ ವರುಷಗಳಿಗೊಮ್ಮೆ ಭೂಮಿಯ ಮೇಲ್ಮೈ ೪೦ ಇಂಚು ತಗ್ಗುತ್ತಿದೆ. ಇದೇ ವೇಗದಲ್ಲಿ ಸವಕಳಿ ಮುಂದುವರಿದರೆ, ಇನ್ನು ೨೦ ಮಿಲಿಯ ವರುಷಗಳಲ್ಲಿ ಭೂಮಿಯ ಮೇಲ್ಮೈ ಸಮುದ್ರ ಮಟ್ಟಕ್ಕೆ ಸಮವಾಗುತ್ತದೆ. ಭೂಮಿಯ ಆಯುಷ್ಯಕ್ಕೆ ಹೋಲಿಸಿದಾಗ ಈ ಅವಧಿ ಬಹಳ ಕಡಿಮೆ.

8)ಗಾಳಿಯ ಬೀಸುವಿಕೆಯಿಂದಾಗಿ ಮರಳಿನ ಕಣಗಳು ಉರುಟುರುಟು ಆಗುತ್ತವೆ. ಅಂದರೆ, ಗಾಳಿ ಬೀಸುವಾಗ ಮರಳಿನ ಕಣಗಳು ಒಂದಕ್ಕಿನ್ನೊಂದು ಮತ್ತು ಅಕ್ಕಪಕ್ಕದ ಇತರ ವಸ್ತುಗಳ ಮೇಲ್ಮೈಗೆ ಉಜ್ಜಿಕೊಳ್ಳುತ್ತವೆ. ಒಮ್ಮೆ ಮರಳಿನ ಕಣ ಗೋಲಾಕೃತಿ ಆಕಾರ ಪಡೆದರೆ, ಅನಂತರ ಮಿಲಿಯಗಟ್ಟಲೆ ವರುಷ ಆಕಾರ ಬದಲಾಯಿಸದೆ ಉಳಿಯುತ್ತದೆ.

9)ಪ್ರತಿಯೊಬ್ಬ ಆಧುನಿಕ ಮನುಷ್ಯನ ಅಗತ್ಯಗಳನ್ನು ಮತ್ತು ಐಷಾರಾಮಿ ಜೀವನದ ಸೌಲಭ್ಯಗಳನ್ನು ಪೂರೈಸಲಿಕ್ಕಾಗಿ, ಪ್ರತಿ ವರುಷ ಕನಿಷ್ಠ ಇಪ್ಪತ್ತು ಟನ್ ಕಚ್ಚಾ ಸಾಮಗ್ರಿಗಳನ್ನು ಭೂಮಿಯಿಂದ ಅಗೆದು ತೆಗೆಯಬೇಕಾಗುತ್ತದೆ.

1)ಭೂಮಿಯ ಆಯಸ್ಕಾಂತ ಕ್ಷೇತ್ರ ದುರ್ಬಲವಾಗುತ್ತಿದೆ. ೧೬೭೦ರಿಂದೀಚೆಗೆ ಅದು ತನ್ನ ಶಕ್ತಿಯ ಶೇಕಡಾ ೧೫ರಷ್ಟನ್ನು ಕಳೆದುಕೊಂಡಿದೆ. ಇದೇ ರೀತಿ ದುರ್ಬಲವಾಗುತ್ತಿದ್ದರೆ, ಇನ್ನು ೨,೦೦೦ ವರುಷಗಳಲ್ಲಿ ಅದು ತನ್ನ ಎಲ್ಲ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಇಸವಿ ೩೫೦೦ರಿಂದ ೪೫೦೦ ಅವಧಿಯಲ್ಲಿ ಭೂಮಿಯ ಆಯಸ್ಕಾಂತ ಕ್ಷೇತ್ರವು ಬಾಹ್ಯ ವಿಶ್ವದಿಂದ ನುಗ್ಗಿ ಬರುವ ವಿಕಿರಣವನ್ನು ತಡೆದುಕೊಳ್ಳುವಷ್ಟು ಸಮರ್ಥವಾಗಿರುವುದಿಲ್ಲ.

2)ಭೂಮಿಯ ಅತಿ ದೊಡ್ಡ ಮರುಭೂಮಿ “ಸಹಾರಾ"ದ ವಿಸ್ತೀರ್ಣ ಯು.ಎಸ್.ಎ. ದೇಶದ ವಿಸ್ತೀರ್ಣಕ್ಕೆ ಸಮಾನ. (ಅರಾಬಿಕ್ ಭಾಷೆಯ ಪದ ಸಹಾರಾದ ಅರ್ಥ ಮರುಭೂಮಿ) ಒಂದಾನೊಂದು ಕಾಲದಲ್ಲಿ ಇದು ಮರುಭೂಮಿ ಆಗಿರಲಿಲ್ಲ ಎಂದರೆ ನಂಬುತ್ತೀರಾ? ೨೦,೦೦೦ ವರುಷಗಳ ಮುಂಚೆ, ಯುರೋಪಿನ ಬಹುಭಾಗವನ್ನು ಹಿಮ ಆವರಿಸಿತ್ತು. ಆ ಕಾಲದಲ್ಲಿ, ಅಲ್ಲಿಂದ ಬೀಸಿ ಬರುತ್ತಿದ್ದ ತಂಪಾದ ಗಾಳಿ ಉತ್ತರ ಆಫ್ರಿಕಾಕ್ಕೆ ತೇವಾಂಶವನ್ನು ಹೊತ್ತು ತರುತ್ತಿತ್ತು. ಈಗ ಮರುಭೂಮಿಯಾಗಿರುವ ಭೂಭಾಗ ಆಗ ನದಿಗಳು ಮತ್ತು ಸರೋವರಗಳು , ಕಾಡು ಮತ್ತು ಹುಲ್ಲುಗಾವಲುಗಳಿದ್ದ ಚೇತೋಹಾರಿ ನೆಲವಾಗಿತ್ತು.

3)ಭೂಮಿಯ ಅತ್ಯಂತ ಒಣ ಪ್ರದೇಶ ಚಿಲಿ ದೇಶದ ಅಟಕಾಮಾ ಮರುಭೂಮಿಯ ಕಲಾಮಾ. ಅಲ್ಲಿ ಈ ತನಕ ಒಂದು ಹನಿ ಮಳೆಯೂ ಬಿದ್ದಿಲ್ಲ.

 11)ಇರುವೆಗಳು ಮನುಷ್ಯರಂತೆಯೇ ಹಲವು ಕೆಲಸಗಳನ್ನು ಮಾಡುತ್ತವೆ. ಡಾ. ಲೂಯಿಸ್ ಥೋಮಸ್ ಎಂಬ ವಿಜ್ನಾನಿ ಹೀಗೆ ಬರೆಯುತ್ತಾರೆ: “ಇರುವೆಗಳು ಬೂಸ್ಟ್ (ಫಂಗಸ್) ಬೆಳೆಸುತ್ತವೆ. ಗಿಡಹೇನುಗಳನ್ನು (ಅಫಿಡ್) ನಾವು ದನಗಳನ್ನು ಸಾಕಿದಂತೆ ಸಾಕುತ್ತವೆ. ತಮ್ಮ ಸೈನ್ಯಗಳಿಂದ ಯುದ್ಧ ಮಾಡುತ್ತವೆ. ವೈರಿಗಳನ್ನು ಬೆದರಿಸಲಿಕ್ಕಾಗಿ ಮತ್ತು ಗೊಂದಲ ಪಡಿಸಲಿಕ್ಕಾಗಿ ರಾಸಾಯನಿಕ ಸಿಂಪಡಿಸುತ್ತವೆ. ಗುಲಾಮರನ್ನು ಸೆರೆಹಿಡಿಯುತ್ತವೆ. ನೇಕಾರ-ಇರುವೆಗಳು ಬಾಲಕಾರ್ಮಿಕರನ್ನು ದುಡಿಸಿಕೊಳ್ಳುತ್ತವೆ. ದಾರವನ್ನು ಎಳೆದು, ಅದರಿಂದ ಎಲೆಗಳನ್ನು ಜೋಡಿಸಿ, ತಮ್ಮ ಬೂಸ್ಟ್ ಉದ್ಯಾನಗಳನ್ನು ನಿರ್ಮಿಸುತ್ತವೆ. ಟೆಲಿವಿಷನ್ ನೋಡುವುದರ ಹೊರತಾಗಿ ಹತ್ತುಹಲವು ಮನುಷ್ಯ ಸಹಜ ಕೆಲಸಗಳನ್ನು ಅವು ಮಾಡುತ್ತವೆ."

     12)ಬಸವನಹುಳಗಳು ಬಣ್ಣವಿಲ್ಲದ, ಅಂಟುಅಂಟಾದ ದ್ರವವನ್ನು ಸ್ರವಿಸುತ್ತವೆ. ಇದು ಬಸವನಹುಳಗಳು ಮುಂದಕ್ಕೆ ಚಲಿಸುವಾಗ ಅವುಗಳ ದೇಹದಡಿಯಲ್ಲಿ ಜಮಖಾನೆಯಂತೆ ಹಾಸುತ್ತದೆ. ಅವುಗಳ ಮೃದು ಶರೀರದ ರಕ್ಷಣೆಗೆ ಇದು ಬಹಳ ಸಹಕಾರಿ. ಬಸವನಹುಳಗಳು ರೇಜರ್ ಬ್ಲೇಡಿನ ಅಂಚಿನಲ್ಲಿ ಸರಿದರೂ ಈ ಸ್ರಾವದಿಂದಾಗಿ ಅವುಗಳ ಶರೀರಕ್ಕೆ ಕಿಂಚಿತ್ತೂ ಧಕ್ಕೆಯಾಗೋದಿಲ್ಲ.

 1)ಸಸ್ಯಗಳ ಮತ್ತು ಪ್ರಾಣಿಗಳ ಲಕ್ಷಣಗಳನ್ನು ಹೊಂದಿರುವ ಏಕಕೋಶ ಜೀವಿಗಳಿವೆ ಎಂದರೆ ನಂಬುತ್ತೀರಾ? ಉದಾಹರಣೆಗೆ ಯೂಗ್ಲಿನಾ ಎಂಬ ಏಕಕೋಶ ಜೀವಿ. ಇದು ನೀರಿನಲ್ಲಿದ್ದಾಗ ಪ್ರಾಣಿಯಂತೆ ಅಂದರೆ ಹಾವಿನ ಚಲನೆಗಳನ್ನು ಮಾಡುತ್ತಾ ಮುಂದಕ್ಕೆ ಸರಿಯುತ್ತದೆ. ಜೊತೆಗೆ, ಇದರಲ್ಲಿದೆ ಸಸ್ಯಗಳ ಪ್ರಧಾನ ಗುಣಲಕ್ಷಣವಾದ ಪತ್ರಹರಿತ್ತು.

     2)ರೇಷ್ಮೆಹುಳಗಳನ್ನು (ಬೊಮ್-ಬಿಕ್ಸ್ ಮೊರಿ) ಮನುಷ್ಯ ಸಾವಿರಾರು ವರುಷ ಸಾಕಿರುವ ಕಾರಣ, ಅದಕ್ಕೆ ಮನುಷ್ಯನ ಆರೈಕೆಯಿಲ್ಲದೆ ಬದುಕಲು ಸಾಧ್ಯವಿಲ್ಲದಾಗಿದೆ. ಅದೊಂದು ಸಾಕುಹುಳವಾಗಿ ಬದಲಾದ ಕಾರಣ, ಹಾರುವ ಶಕ್ತಿಯನ್ನೂ ಕಳೆದುಕೊಂಡಿದೆ.

     3)ಸಮುದ್ರಹಾವುಗಳಲ್ಲಿ ಸುಮಾರು ಐವತ್ತು ಸ್ಪಿಷೀಸ್‌ಗಳನ್ನು ಗುರುತಿಸಲಾಗಿದೆ. ಅವೆಲ್ಲವೂ ವಿಷದ ಹಾವುಗಳು. ಪರ್ಷಿಯನ್ ಕೊಲ್ಲಿಯಿಂದ ತೊಡಗಿ ಜಪಾನಿನ ವರೆಗೆ ಮತ್ತು ಆಸ್ಟ್ರೇಲಿಯಾ ಹಾಗೂ ಮೆಲಾನೆಸಿಯಾದ ಸುತ್ತಲೂ ಸಮುದ್ರತೀರಗಳಲ್ಲಿ ಅವನ್ನು ಬಹುಸಂಖ್ಯೆಯಲ್ಲಿ ಕಾಣಬಹುದು. ಅವುಗಳ ವಿಷ ನಾಗರಹಾವಿನ ವಿಷಕ್ಕಿಂತ ಹತ್ತು ಪಟ್ಟು ತೀಕ್ಷ್ಣ. ಸಮುದ್ರಹಾವು ಕಚ್ಚಿದ ಮನುಷ್ಯರು ಕೇವಲ ಎರಡೂವರೆ ಗಂಟೆಗಳಲ್ಲಿ ಸತ್ತುಹೋದ ನಿದರ್ಶನಗಳಿವೆ.

     4)ಬೇರೆಲ್ಲ ಜಾತಿಯ ಪ್ರಾಣಿಗಳ ವಿವಿಧ ನಮೂನೆಗಳ ಒಟ್ಟು ಸಂಖ್ಯೆಗಿಂತ ಜಾಸ್ತಿ ಸಂಖ್ಯೆಯ ಕೀಟಗಳ ನಮೂನೆಗಳಿವೆ. ಅಂದರೆ ಕೀಟಪ್ರಭೇದಗಳ ಸಂಖ್ಯೆ ಅಷ್ಟು ಅಗಾಧ.

1)ಬೆಂಕಿಕಡ್ಡಿಗಳನ್ನು ಸಂಶೋಧಿಸಿದ ಬ್ರಿಟಿಷ್ ರಾಸಾಯನಿಕ ವಿಜ್ನಾನಿ ಜಾನ್ ವಾಕರ್ ತನ್ನ ಸಂಶೋಧನೆಗೆ ಪೇಟೆಂಟ್ ಪಡೆದುಕೊಳ್ಳಲಿಲ್ಲ. ಯಾಕೆಂದರೆ, ಇಂತಹ ಮುಖ್ಯವಾದ ಸಾಧನ ಜನಸಾಮಾನ್ಯರ ಸೊತ್ತು ಆಗಿರಬೇಕೆಂದು ಆತ ನಂಬಿದ್ದ.

     2)ಪ್ಯಾರಿಸಿನ ಪ್ರಯೋಗಾಲಯದಲ್ಲಿ 1902ರಲ್ಲಿ ರೇಡಿಯಮ್ ಸಂಶೋಧಿಸಿದ ಪಿಯರ್ರೆ ಮತ್ತು ಮೇರಿ ಕ್ಯೂರಿ ರೇಡಿಯಮ್ ಮಾಡುವ ವಿಧಾನಕ್ಕೆ ಪೇಟೆಂಟ್ ಪಡೆಯಲು ನಿರಾಕರಿಸಿದರು. ರೇಡಿಯಮ್ ಜಗತ್ತಿಗೆ ಸೇರಿದ ಸೊತ್ತು ಮತ್ತು ಅದರಿಂದ ಲಾಭ ಮಾಡಿಕೊಳ್ಳಲು ಯಾರಿಗೂ ಅಧಿಕಾರವಿಲ್ಲವೆಂದೂ ಅವರು ಘೋಷಿಸಿದರು.

     3)”ದ ಓಲ್ಡ್ ಮ್ಯಾನ್ ಆಂಡ್ ದ ಸೀ” ಎಂಬ ತನ್ನ ಕಾದಂಬರಿಗೆ ಗಳಿಸಿದ ನೊಬೆಲ್ ಪ್ರಶಸ್ತಿಯ ಹಣವನ್ನು ಅರ್ನೆಸ್ಟ್ ಹೆಮಿಂಗ್‌ವೇ ಪೂರ್ವ ಕ್ಯೂಬಾದ ಶ್ರೈನ್ ಆಫ್ ದಿ ವರ್ಜಿನ್‌ಗೆ ದಾನವಾಗಿತ್ತ.

     4)ಜಾನ್ ಡಿ. ರಾಕ್‌ಫೆಲ್ಲರ್ 1855ರಲ್ಲಿ, ತನ್ನ ಹದಿನಾರನೆಯ ವಯಸ್ಸಿನಲ್ಲಿ, ಮೊತ್ತಮೊದಲ ದಾನ ನೀಡಿದ. ಅದಾಗಿ ಎಂಬತ್ತೆರಡು ವರುಷಗಳ ನಂತರ ಆತ ತೀರಿಕೊಳ್ಳುವ ವರೆಗೆ ಅವನು 53,13,26,842 ಡಾಲರ್ ಹಣವನ್ನು ದಾನವಿತ್ತಿದ್ದ.

11)ಜಪಾನಿನ ನಾರಾ ಎಂಬಲ್ಲಿರುವ ತೊಡೈಜಿ ಬೌದ್ಧ ಗುರುಕುಲದ ವಿಶಾಲ ಸಭಾಂಗಣವನ್ನು ಎಂಟನೆಯ ಶತಮಾನದ ಮಧ್ಯಕಾಲದಲ್ಲಿ ನಿರ್ಮಿಸಲಾಯಿತು. ಐವತ್ತಮೂರು ಅಡಿ ಎತ್ತರದ ಬುದ್ಧನ ಭವ್ಯ ಕಂಚಿನ ಮೂರ್ತಿ ಅಲ್ಲಿದೆ. ಹತ್ತು ಲಕ್ಷ ಪೌಂಡುಗಳಿಗಿಂತ ಅಧಿಕ ತೂಕದ ಈ ಮೂರ್ತಿಗೆ ಕಾಲು-ಟನ್ ತೂಕದ ಚಿನ್ನದಿಂದ ಲೇಪ ನೀಡಲಾಗಿದೆ.

12)“ವೆಲ್‌ಕಮ್ ಸ್ಟ್ರೇಂಜರ್” ಎಂಬ ಹೆಸರಿನ ಚಿನ್ನದ ತುಂಡು ಈ ವರೆಗೆ ಸಿಕ್ಕಿದ ಅತ್ಯಧಿಕ ತೂಕದ ಚಿನ್ನದ ತುಂಡು. ಅದರ ತೂಕ ೨೦೦ ಪೌಂಡುಗಳಿಗಿಂತ ಜಾಸ್ತಿ. ಆಸ್ಟ್ರೇಲಿಯಾದ ಬಲ್ಲಾರಾಟ್ ಎಂಬಲ್ಲಿ ೧೮೬೯ರಲ್ಲಿ ಇದನ್ನು ಪತ್ತೆ ಮಾಡಿದವರು ಜಾನ್ ಡೀಸನ್ ಮತ್ತು ರಿಚರ್ಡ್ ಓಟ್ಸ್.

13)ಈಗ ಸಿಕ್ಕಿರುವ ಪ್ರತಿಯೊಂದು ಔನ್ಸ್ ಚಿನ್ನಕ್ಕಾಗಿ ಗಣಿಗಾರರು ೨.೫ ಮೈಲು ಆಳದ ವರೆಗೂ ಭೂಮಿಯನ್ನು ಅಗೆದಿದ್ದಾರೆ!

14)ಬ್ರಿಟಿಷ್ ಪರ್ಯಟನಗಾರ ಮಾರ್ಟಿನ್ ಫ್ರೊಬಿಷರ್ ೧೫೭೮ರಲ್ಲಿ ಬಾಫಿನ್ ದ್ವೀಪದಿಂದ ೨೦೦ ಟನ್ ಹೊಳೆಯುವ ಚಿನ್ನದ ಅದಿರಿನೊಂದಿಗೆ ಹಿಂತಿರುಗಿದಾಗ, ಅವನಿಂದಾಗಿ ಬ್ರಿಟನಿನಲ್ಲಿ "ಚಿನ್ನದ ಹುಚ್ಚು” ಹಬ್ಬಿತು. ಅದರಿಂದ ಹೆಚ್ಚೆಚ್ಚು ಚಿನ್ನ ಪಡೆಯಲಿಕ್ಕಾಗಿ ಭಾರೀ ಪ್ರಯತ್ನ ಮಾಡಲಾಯಿತು. ಆದರೆ ಆ ಅದಿರು ಕಬ್ಬಿಣದ ಪೈರೈಟ್ (“ಮೂರ್ಖರ ಚಿನ್ನ”) ಆಗಿತ್ತು. ಕೊನೆಗೆ ಅದನ್ನು ಪುಡಿಪುಡಿ ಮಾಡಿ ರಸ್ತೆಗಳ ರಿಪೇರಿಗೆ ಬಳಸಲಾಯಿತು.

1)ಒಂದು ಔನ್ಸಿಗಿಂತಲೂ  (೧ ಔನ್ಸ್ = ೨೮.೩೫ ಗ್ರಾಮ್) ಕಡಿಮೆ ತೂಕದ ಚಿನ್ನವನ್ನು ಉತ್ಪಾದಿಸಲು ದಕ್ಷಿಣ ಆಫ್ರಿಕಾದ ಎರಡು ಟನ್ ತೂಕದಷ್ಟು ಶಿಲೆಗಳನ್ನು ಜಾಲಾಡಿಸಬೇಕು.

2)ಬೈಬಲಿನ ಕಿಂಗ್ ಜೇಮ್ಸ್ ಅವರ ಅನುವಾದದಲ್ಲಿ ಬೆಲೆಬಾಳುವ ಮುತ್ತುರತ್ನಗಳ ೧,೭೦೦ ಉಲ್ಲೇಖಗಳಿವೆ.

3)ಐಸಾಕ್ ನ್ಯೂಟನ್ ಬಹಳಷ್ಟು ಸಮಯ ಮತ್ತು ಶ್ರಮವನ್ನು "ಫಿಲಾಸಫರ್ಸ್ ಸ್ಟೋನ್” ಹುಡುಕಲು ವ್ಯಯಿಸಿದ; ಅದರ ಸಹಾಯದಿಂದ ಚಿನ್ನ ತಯಾರಿಸಬಹುದೆಂಬುದು ಅವನ ಆಸೆಯಾಗಿತ್ತು.

4)ಜಗತ್ತಿನ ಅತ್ಯಂತ ದೊಡ್ಡ ವಜ್ರ ಅಕಸ್ಮಾತ್ ಸಿಕ್ಕಿದ್ದು ೧೯೦೫ರಲ್ಲಿ ದಕ್ಷಿಣ ಆಫ್ರಿಕಾದ ಪ್ರಿಟೋರಿಯಾದ ಪ್ರೀಮಿಯರ್ ಗಣಿ ಸಂಖ್ಯೆ ೨ರಲ್ಲಿ. ಅದರ ತೂಕ ೩,೧೦೬ ಕ್ಯಾರೆಟ್ ಅಂದರೆ ೧.೭೫ ಪೌಂಡ್, ಆಗಿನ ಬೆಲೆ ೭,೫೦,೦೦೦ ಡಾಲರ್! ಅದನ್ನು ಸಾಮಾನ್ಯ ರಿಜಿಸ್ಟರ್ಡ್ ಅಂಚೆಯಲ್ಲಿ ಇಂಗ್ಲೆಂಡಿಗೆ ಕಳಿಸಲಾಯಿತು. ಆಗಿನ ದೊರೆ ಕಿಂಗ್ ಎಡ್ವರ್ಡ್ VII ಅದನ್ನು ಕಂಡು ಹೀಗೆಂದ: “ನಾನು ಇದನ್ನು ರಸ್ತೆಯಲ್ಲಿ ಕಂಡಿದ್ದರೆ, ಇದೊಂದು ಗಾಜಿನ ತುಂಡೆಂದು ಒದ್ದು ಬಿಡುತ್ತಿದ್ದೆ.” ಕುಲ್ಲಿನಾನ್ ಎಂಬ ಆ ಜಗತ್ಪ್ರಸಿದ್ಧ ವಜ್ರದಿಂದ ೧೦೫ ರತ್ನಗಳನ್ನು ಕತ್ತರಿಸಿ ತೆಗೆಯಲಾಯಿತು. ಅವುಗಳಲ್ಲಿ ಅತ್ಯಂತ ದೊಡ್ಡ ತುಂಡುಗಳು ೫೩೦ ಕ್ಯಾರೆಟಿನ “ಸ್ಟಾರ್ ಆಫ್ ಆಫ್ರಿಕಾ” ಮತ್ತು ೩೧೭ ಕ್ಯಾರೆಟಿನ “ಕುಲ್ಲಿನಾನ್II”  ಇವೆರಡೂ ಬ್ರಿಟಿಷ್ ರಾಜ ಕಿರೀಟದಲ್ಲಿವೆ.

ಇವೂ ನೆನಪಿರಲಿ
-ಭಾರತದ ಹಲವು ರಾಜ್ಯಗಳ ಮೇಲೆ ಧಾಳಿ ಮಾಡಿದ ಬ್ರಿಟಿಷ್ ಸೈನ್ಯ, ಆ ರಾಜ್ಯಗಳ ಲಕ್ಷಗಟ್ಟಲೆ ಸೈನಿಕರನ್ನು ಕೊಲೆ ಮಾಡಿತು.
-ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಸಾವಿರಾರು ಭಾರತೀಯರನ್ನು ಬ್ರಿಟಿಷರು ಕೊಂದರು.
-ಸ್ವಾತಂತ್ರ್ಯ ಹೋರಾಟವನ್ನು ದಮನ ಮಾಡಲಿಕ್ಕಾಗಿ, ಸಾವಿರಾರು ಭಾರತೀಯರನ್ನು ಬ್ರಿಟಿಷರು ಗಲ್ಲಿಗೇರಿಸಿದರು.
-ಅದಲ್ಲದೆ, ಒಂದನೇ ಮಹಾಯುದ್ಧ ಮತ್ತು 2ನೇ ಮಹಾಯುದ್ಧದಲ್ಲಿ, ಭಾರತೀಯ ಸೈನ್ಯವು ಭಾಗವಹಿಸುವಂತೆ ಬ್ರಿಟಿಷರು  ಕುಟಿಲ ತಂತ್ರ ಮಾಡಿದರು. ಜರ್ಮನಿಯ ವಿರುದ್ಧ ಯುದ್ಧಕ್ಕೆ ಬ್ರಿಟಿಷರಿಗೆ ಭಾರತೀಯ ಸೈನ್ಯ ಬೇಕಾಗಿತ್ತು. ಎರಡು ಮಹಾಯುದ್ಧಗಳಲ್ಲಿ ಬಲಿದಾನಗೈದ ಭಾರತೀಯ ಸೈನಿಕರ ಸಂಖ್ಯೆ 1,61,187ಕ್ಕಿಂತ ಅಧಿಕ.
ಇವರೆಲ್ಲರ ಜೀವಕ್ಕೆ ಬೆಲೆ ಕಟ್ಟಲಾದೀತೇ?
 
ಜಲಿಯಾನಾವಾಲಾ ಬಾಗ್‌ನಲ್ಲಿ ಬ್ರಿಟಿಷರ ಹತ್ಯಾಕಾಂಡದಿಂದ ಇಡೀ ಜಗತ್ತೇ ಆಕ್ರೋಶಗೊಂಡಿತ್ತು. ಯಾಕೆಂದರೆ ಅದು ಅಧಿಕಾರದ ಮದ ತುಂಬಿದ, ರಾಕ್ಷಸೀ ಪ್ರವೃತ್ತಿಯ ಬ್ರಿಟಿಷ್ ಅಧಿಕಾರಿಯೊಬ್ಬನ ಆದೇಶದಂತೆ ನಿರಪರಾಧಿ ಪ್ರಜೆಗಳ ಮೇಲೆ 13-4-1919ರಂದು ಗುಂಡಿನ ಮಳೆಗರೆದು ನಡೆಸಿದ 379 ಜನರ ಕಗ್ಗೊಲೆ. ಬ್ರಿಟಿಷ್ ಸರಕಾರದ ಹಾಗೂ ರಾಜ ಮನೆತನದ ಯಾರಾದರೂ ಈ “ಮಾನವಕುಲದ ಕಳಂಕವಾದ ಕಗ್ಗೊಲೆ” ಬಗ್ಗೆ ಕಿಂಚಿತ್ ಪಶ್ಚಾತ್ತಾಪ ವ್ಯಕ್ತಪಡಿಸಿದ್ದು ಇದೆಯೇ?

Pages