ಕೃಷಿ ವಿಜ್ನಾನ

ಪುಸ್ತಕ: ಕೃಷಿ ವಿಜ್ನಾನ
ಲೇಖಕರು: ಡಾ. ಜಿ.ಕೆ. ವೀರೇಶ್ ಮತ್ತು ಅಡ್ಡೂರು ಕೃಷ್ಣ ರಾವ್
ಪ್ರಕಾಶಕರು: ನವಕರ್ನಾಟಕ ಪ್ರಕಾಶನ, ಬೆಂಗಳೂರು
ಪ್ರಕಟಣೆಯ ವರುಷ: ೨೦೧೭,     ಪುಟ: ೧೨೦,      ಬೆಲೆ: ರೂ.೭೫
ಮಕ್ಕಳಿಗೆ ವಿಜ್ನಾನ ವಿಷಯದ ಕಲಿಕೆ ರೋಚಕವೂ, ಆಸಕ್ತಿದಾಯಕವೂ ಆಗಿರಬೇಕೆಂಬುದು ಎಲ್ಲರ ಆಶಯ. ಇಂದಿನ ವಿಜ್ನಾನ ಶಿಕ್ಷಣ ಮಕ್ಕಳಿಗೆ ನಿಜಕ್ಕೂ ಆ ಅನುಭವವನ್ನು ನೀಡುತ್ತಿದೆಯೇ? ಎಂದು ಕೇಳಿದರೆ, ಇಲ್ಲ ಎನ್ನಬೇಕಾಗುತ್ತದೆ. ಈ ಕೊರತೆಯನ್ನು ನೀಗಿಸಲಿಕ್ಕಾಗಿ, ಬೆಂಗಳೂರಿನ ನವಕರ್ನಾಟಕ ಪ್ರಕಾಶನವು “ವಿಜ್ನಾನ – ಸರಳ ಪರಿಚಯ” ಮಾಲೆಯ ಪ್ರಕಟಣೆಯನ್ನು ಆರಂಭಿಸಿತು. ಐದರಿಂದ ಹತ್ತನೆಯ ತರಗತಿಯ ವರೆಗಿನ ವಿದ್ಯಾರ್ಥಿಗಳಿಗೆ ಮತ್ತು ಕಲಿಸುತ್ತಿರುವ ಶಿಕ್ಷಕರಿಗೆ ಉಪಯುಕ್ತವಾಗಬೇಕು ಎನ್ನುವ ಉದ್ದೇಶದಿಂದ ಈ ಮಾಲೆಯ ಪುಸ್ತಕಗಳನ್ನು ಬರೆಯಲಾಗಿದೆ. ವಿಜ್ನಾನ ಶಿಕ್ಷಣದ ಗುಣಮಟ್ಟವನ್ನು ಮೇಲೆತ್ತಲು ಈ ಪುಸ್ತಕಗಳು ಮೀಟುಗೋಲಾಗಬಲ್ಲವೆಂಬುದು ಪ್ರಕಾಶಕರ ಮತ್ತು ಲೇಖಕರ ಆಶಯ.

“ಕೃಷಿ ವಿಜ್ನಾನ” ಇದೇ ಮಾಲೆಯ ಒಂದು ಪುಸ್ತಕ. ಇದರ ಲೇಖಕರು ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಉಪಕುಲಪತಿಗಳಾದ ಡಾ. ಜಿ.ಕೆ. ವೀರೇಶ್ ಮತ್ತು ಕೃಷಿಕ, ಕೃಷಿ ಅಂಕಣ ಬರಹಗಾರ, ಕೃಷಿ ಪುಸ್ತಕಗಳ ಲೇಖಕ, ಸಾವಯವ ಕೃಷಿ ಆಂದೋಲನದ ಕಾರ್ಯಕರ್ತ ಹಾಗೂ ನಿವೃತ್ತ ಬ್ಯಾಂಕ್ ಕೃಷಿ ಅಧಿಕಾರಿ ಅಡ್ಡೂರು ಕೃಷ್ಣ ರಾವ್.

ಈ ಪುಸ್ತಕದಲ್ಲಿ ೨೫ ಅಧ್ಯಾಯಗಳಿದ್ದು, ಇವುಗಳಲ್ಲಿ ಪ್ರತಿಯೊಂದರ ಬಗ್ಗೆಯೂ ದೊಡ್ಡದೊಡ್ಡ ಗ್ರಂಥಗಳು ಪ್ರಕಟವಾಗಿವೆ.  ಅಷ್ಟು ವಿಸ್ತಾರವಾದ ಆ ವಿಷಯಗಳನ್ನು ಪುಸ್ತಕದಲ್ಲಿ ಸರಳವಾಗಿ ವಿವರಿಸಲಾಗಿದೆ. ಅಧ್ಯಾಯಗಳ ಪಟ್ಟಿ ಇಲ್ಲಿದೆ:
01.    ಕೃಷಿ ಪ್ರಾರಂಭ
02.    ಕೃಷಿಯ ಕಾಲಘಟ್ಟ
03.    ಕರ್ನಾಟಕದಲ್ಲಿ ಕೃಷಿ
04.    ಮಣ್ಣು ವಿಜ್ನಾನ
05.    ಕೃಷಿಯಲ್ಲಿ ನೀರು ನಿರ್ವಹಣೆ
06.    ಗೊಬ್ಬರ
07.    ಕಾಂಪೋಸ್ಟ್ ಮಾಡುವ ವಿಧಾನ
08.    ಎರೆಗೊಬ್ಬರ
09.    ಜೈವಿಕ ಗೊಬ್ಬರ
10.    ಬೀಜ ವಿಜ್ನಾನ
11.    ಸಸ್ಯ ಸಂರಕ್ಷಣೆ
12.    ತೋಟಗಾರಿಕೆ
13.    ಪ್ಲಾಂಟೇಷನ್ ಮತ್ತು ಸಾಂಬಾರ ಬೆಳೆಗಳು
14.    ತರಕಾರಿಗಳು
15.    ಪುಷ್ಪ ಕೃಷಿ ಮತ್ತು ಲ್ಯಾಂಡ್ ಸ್ಕೇಪಿಂಗ್
16.    ಹಿಪ್ಪು ನೇರಳೆ ಬೇಸಾಯ (ರೇಷ್ಮೆ ಕೃಷಿ)
17.    ಅರಣ್ಯ ಕೃಷಿ
18.    ಜೇನ್ನೊಣ ಸಾಕಣೆ
19.    ಹೈನುಗಾರಿಕೆ
20.    ಒಳನಾಡು ಮೀನುಗಾರಿಕೆ
21.    ಸಾವಯವ ಕೃಷಿ
22.    ಕೃಷಿ ಉಪಕರಣಗಳು
23.    ಕೃಷಿ ವಿಸ್ತರಣೆ
24.    ಕೃಷಿ ಮಾರುಕಟ್ಟೆ
25.    ಸಮಗ್ರ ಕೃಷಿ