11)ವ್ಯಾಂಪೈರ್ ಬಾವಲಿಗಳನ್ನೂ ಭಯಂಕರ ಪ್ರಾಣಿಗಳೆಂದು ಜನರು ಭಾವಿಸಿದ್ದಾರೆ. ಆದರೆ, ರಕ್ತ ಹೀರುವ ಈ ಬಾವಲಿ, ಇತರ ಪ್ರಾಣಿಗಳ ಕುತ್ತಿಗೆಯ ಚರ್ಮವನ್ನು ಕಚ್ಚಿ ಸೀಳುವುದಿಲ್ಲ. ಬದಲಾಗಿ, ಬಟ್ಟೆಯಿಂದ ಮುಚ್ಚದಿರುವ ಚರ್ಮವನ್ನು ರಕ್ತ ಸಿಗುವ ವರೆಗೆ ತನ್ನ ಹಲ್ಲುಗಳಿಂದ ಕೆರೆಯುತ್ತದೆ. ಅದರ ಕೆರೆಯುವಿಕೆ ಎಷ್ಟು ನಯವಾಗಿರುತ್ತದೆ ಎಂದರೆ, ನಿದ್ದೆಯಲ್ಲಿರುವ ಬಲಿಪ್ರಾಣಿಗೆ ಎಚ್ಚರವಾಗುವುದೇ ಇಲ್ಲ!
12)ಕುದುರೆ ಬಹಳ ಸಣ್ಣ ಪ್ರಾಣಿಯಾಗಿತ್ತು. ಒಬ್ಬ ಸವಾರನನ್ನು ಹೆಚ್ಚು ಸಮಯ ಹೊತ್ತುಕೊಂಡು ಹೋಗುವಷ್ಟು ಅದು ಶಕ್ತಿಶಾಲಿಯಾಗಿರಲಿಲ್ಲ. ಅಲೆಮಾರಿ ಜನಾಂಗದವರು ಯುದ್ಧಕ್ಕಾಗಿ ಪಳಗಿಸಿದ ಸಂಕರ ತಳಿಯ ದೊಡ್ಡ ಕುದುರೆಗಳನ್ನು ಮಧ್ಯಪ್ರಾಚ್ಯ ಮತ್ತು ಯುರೋಪಿನಲ್ಲಿ ಜನರು ಮೊದಲ ಬಾರಿ ಕಂಡಾಗ ಹೆದರಿದ್ದರು!
13)ಕರಡಿ (ಗ್ರಿಜ್ಲಿ ಬೇರ್) ಒಳ್ಳೆಯ ಓಟಗಾರ. ಅದು ಕುದುರೆಯಷ್ಟೇ ವೇಗದಲ್ಲಿ ಓಡಬಲ್ಲದು.
14)ಆಫ್ರಿಕಾದ ಗೊಲಿಯಾಥ್ ಕಪ್ಪೆ (ರಾನಾ ಗೊಲಿಯಾತ್) ಎರಡೂವರೆ ಅಡಿಗಳಿಗಿಂತ ಜಾಸ್ತಿ ಉದ್ದವಿರುತ್ತದೆ! ಮೂಗಿನಿಂದ ಕಾಲಿನ ತುದಿಯ ವರೆಗೆ ಅವುಗಳ ಉದ್ದ ೩೨.೦೮ ಇಂಚಿನ ವರೆಗೆ ದಾಖಲಾಗಿದೆ. ಅವುಗಳ ತೂಕವೂ ಭರ್ಜರಿ - ೩.೧೫ ಕಿಲೋ ತನಕ! (ಫೋಟೋ)
15)ಅತ್ಯಂತ ವೇಗವಾಗಿ ಓಡುವ ನಾಯಿ ಗ್ರೇಹೌಂಡ್. ಇದು ಗಂಟೆಗೆ ೬೬.೭ ಕಿಮೀ ವೇಗದಲ್ಲಿ ಓಡಬಲ್ಲದು! ಈಜಿಪ್ಟಿನಲ್ಲಿ ೬,೦೦೦ ವರುಷಗಳ ಹಿಂದೆ ಈ ಜಾತಿಯ ನಾಯಿಗಳನ್ನು ಸಾಕುತ್ತಿದ್ದದ್ದು ದಾಖಲಾಗಿದೆ.