6)ಅಳಿಲಿನ ಕುಟುಂಬಕ್ಕೆ ಸೇರಿದ ವುಡ್‌ಚಕ್ (ಅಥವಾ ಗ್ರೌಂಡ್‌ಹೊಗ್) ಮರಗಳನ್ನು ಹತ್ತುತ್ತದೆ. ಇದರ ಪ್ರಾಣಿಶಾಸ್ತ್ರೀಯ ಹೆಸರು ಮರ್ಮೊಟಾ ಮೊನಾಕ್ಸ್. ಉತ್ತರ ಅಮೇರಿಕಾದ ಯುಎಸ್‌ಎ ಹಾಗೂ ಕೆನಡಾ ದೇಶಗಳಲ್ಲಿ ವಾಸಿಸುವ ಇದು ಗಂಟೆಗೆ ೨,೧೦೦ ಸಲ ಉಸಿರಾಡುತ್ತದೆ. ಆದರೆ, ಶಿಶಿರ ನಿದ್ದೆ ಮಾಡುವಾಗ ಗಂಟೆಗೆ ಕೇವಲ ಹತ್ತು ಸಲ ಉಸಿರಾಡುತ್ತದೆ! (ಫೋಟೋ)
7)ಶ್ರೂ ಎಂಬ ಉತ್ತರ ಅಮೇರಿಕಾದ ಅತಿ ಸಣ್ಣ ಸಸ್ತನಿ ಭಯಂಕರ ಪ್ರಾಣಿ. ಈ ಗುಂಪಿನ ಸಣ್ಣ ಬಾಲದ ಶ್ರೂ, ತನ್ನ ಮೈತೂಕದ ಎರಡು ಪಟ್ಟು ತೂಕವಿರುವ ಪ್ರಾಣಿಗಳಿಗೂ ಧಾಳಿ ಮಾಡುತ್ತದೆ; ತನ್ನ ಜೊಲ್ಲುರಸದ ಗ್ರಂಥಿಗಳ ವಿಷಪೂರಿತ ಸ್ರಾವದಿಂದ ಅವನ್ನು ಕೊಂದು, ಅವುಗಳ ಎಲುಬು ಸಹಿತವಾಗಿ ತಿಂದು ಬಿಡುತ್ತದೆ. ಇದರ ಆ ಗ್ರಂಥಿಗಳಲ್ಲಿರುವ ವಿಷ ೨೦೦ ಇಲಿಗಳನ್ನು ಕೊಲ್ಲಲು ಸಾಕು ಎಂಬುದನ್ನು ಪ್ರಯೋಗಗಳು ತೋರಿಸಿ ಕೊಟ್ಟಿವೆ.
8)ನೀರಾನೆಗಳು ತಮ್ಮ ಮರಿಗಳಿಗೆ ನೀರಿನೊಳಗೆ ಜನ್ಮ ನೀಡುತ್ತವೆ; ತಮ್ಮ ಮರಿಗಳನ್ನು ನದಿಗಳಲ್ಲೇ ಸಾಕುತ್ತವೆ. ಎಳೆಯ ನೀರಾನೆಗಳು ಗಾಳಿಗಾಗಿ ಆಗಾಗ್ಗೆ ನೀರಿನೊಳಗಿನಿಂದ ಮೇಲಕ್ಕೆ ಬರುತ್ತವೆ.
9)ರಾಜ ಕುಬ್‌ಲಾಯ್ ಖಾನ್ ಆಳ್ವಿಕೆಯ ಕಾಲದಲ್ಲಿ ಚೀನೀಯರು ಬೇಟೆಗಾಗಿ ಸಿಂಹಗಳನ್ನು ಪಳಗಿಸಿದ್ದರು. ಈ ಸಿಂಹಗಳು ಕಾಡುಕೋಣಗಳು ಮತ್ತು ಕರಡಿಗಳಂತಹ ದೊಡ್ದ ಪ್ರಾಣಿಗಳನ್ನು ಬೆನ್ನಟ್ಟಿ, ಕೊಂದು, ಬೇಟೆಗಾರರು ಬರುವ ವರೆಗೆ ಕಾಯುತ್ತಿದ್ದವು.
10)ಅರ್ಜೆಂಟೀನಾದ ಕೊಂಬಿನ ಕಪ್ಪೆ, ಕುದುರೆಯ ತುಟಿಗಳಿಗೆ ಕಚ್ಚಿದರೆ ಆ ಕುದುರೆ ಸತ್ತೇ ಹೋಗುತ್ತದೆಂದು ಅಲ್ಲಿನ ಜನರು ನಂಬುತ್ತಿದ್ದರು. ನಿಜ ಹೇಳಬೇಕೆಂದರೆ, ಕಪ್ಪೆಯ ಬಾಯಿಯಲ್ಲಿ ಯಾವುದೇ ವಿಷವಿಲ್ಲ. ಅದು ತನ್ನ ಗಾತ್ರಕ್ಕಿಂತ ಹಲವು ಪಟ್ಟು ಹೆಚ್ಚಿನ ಗಾತ್ರದ ಪ್ರಾಣಿಗಳಿಗೂ ಧಾಳಿ ಮಾಡುತ್ತಿದ್ದ ಕಾರಣ ಅದು ಭಯಂಕರ ಪ್ರಾಣಿ ಎಂದು ಪ್ರಚಾರವಾಯಿತು.