೬೦.ಜಗತ್ತಿಗೆ ಭಾರತದ ಕೊಡುಗೆ: ಓಪನ್ ಸೋರ್ಸ್ ಡ್ರಗ್ ಡಿಸ್ಕವರಿ ಪ್ರೋಗ್ರಾಮ್
ಭಾರತದ ವೈಜ್ನಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಲಿ (ಸಿಎಸ್‌ಐಆರ್) ಓಪನ್ ಸೋರ್ಸ್ ಡ್ರಗ್ ಡಿಸ್ಕವರಿ ಪ್ರೋಗ್ರಾಮ್ ಎಂಬ ವಿಶೇಷ ಪ್ರೋಗ್ರಾಮನ್ನು ಶುರು ಮಾಡಿದೆ. ಜಗತ್ತಿನ ಬಡ ಮತ್ತು ಅಭಿವೃದ್ಧಿಶೀಲ ದೇಶಗಳ ಜನರಿಗೆ, ಮುಖ್ಯವಾಗಿ ದುರ್ಬಲ ವರ್ಗದವರಿಗೆ ಕೈಗೆಟಕುವ ದರಗಳಲ್ಲಿ ಔಷಧಿಗಳನ್ನು ಒದಗಿಸುವುದು ಇದರ ಉದ್ದೇಶ.
ಕ್ಷಯ ಮತ್ತು ಮಲೇರಿಯಾ ಇತ್ಯಾದಿ ಉಷ್ಣವಲಯದ ಜನರನ್ನು ಬಾಧಿಸುವ ರೋಗಗಳಿಗೆ ಹೊಸ ಮತ್ತು ಅಗ್ಗದ ದರದ ಔಷಧಿ ಮತ್ತು ಚಿಕಿತ್ಸಾ ವಿಧಾನಗಳನ್ನು ಶೋಧಿಸುವ ಬಗೆಗಿನ ಸಮಸ್ಯೆಗಳಿಗೆ ಪರಿಹಾರಗಳನ್ನು ಹುಡುಕಲಿಕ್ಕಾಗಿ ಜಗತ್ತಿನ ಪ್ರತಿಭಾವಂತರು ಒಟ್ಟಾಗಿ ಕೆಲಸ ಮಾಡಲು ವೇದಿಕೆಯೊಂದನ್ನು ಒದಗಿಸುವುದೇ ಈ ಪ್ರೋಗ್ರಾಮಿನ ಪ್ರಧಾನ ಉದ್ದೇಶ.
ಈಗಾಗಲೇ ಸಾಫ್ಟ್-ವೇರ್ ಮತ್ತು ಹ್ಯೂಮನ್ ಜೀನೋಮ್ ಸೀಕ್ವೆನ್ಸಿಂಗ್ ಇಂತಹ ಕ್ಷೇತ್ರಗಳಲ್ಲಿ ಈ ರೀತಿಯ ಜಾಗತಿಕ ಸಹಯೋಗದ ಪ್ರೋಗ್ರಾಮುಗಳು ಚಾಲ್ತಿಯಲ್ಲಿವೆ. ಡ್ರಗ್ ಡಿಸ್ಕವರಿ ಬಗ್ಗೆ ಇಂತಹ ಪ್ರೋಗ್ರಾಮ್ ಮೊದಲಾಗಿ ಕೈಗೆತ್ತಿಕೊಂಡದ್ದು ಭಾರತದ ಹೆಗ್ಗಳಿಕೆ.
ಫೋಟೋ: ವೈದ್ಯಕೀಯ ಸಂಶೋಧನೆಯ ಸಾಂದರ್ಭಿಕ ಚಿತ್ರ