ಭಾರತೀಯ ಚಿತ್ರಕಲೆ - ಭಾಗ 8

ಮೊಘಲರ ಪುಟಾಣಿ ಚಿತ್ರಗಳು
೧೬ನೇ ಶತಮಾನದಲ್ಲಿ ಮೊಘಲ್ ದೊರೆ ಅಕ್ಬರ ಪರ್ಷಿಯಾದಿಂದ ಕಲಾಕಾರರನ್ನು ಕರೆಸಿ, ಸ್ಥಳೀಯ ಕಲಾಕಾರರಿಗೆ ತರಬೇತಿ ನೀಡುವ ವ್ಯವಸ್ಥೆ ಮಾಡಿದ್ದು ಮೊಘಲ್ ಚಿತ್ರಕಲೆಯ ನಾಂದಿ. ಹೆಸರೇ ಸೂಚಿಸುವಂತೆ ಇವು ಅಳತೆಯಲ್ಲಿ ಚಿಕ್ಕವು. ಈ ಚಿತ್ರಗಳಲ್ಲಿ ಸೂಕ್ಷ್ಮ ವಿವರಗಳು ಜಾಸ್ತಿ. ಅಲಂಕಾರಿಕ ಚೌಕಟ್ಟು ಮತ್ತು ಹಿನ್ನೆಲೆಯಲ್ಲಿರುವ ವಿವರಗಳು ಈ ಚಿತ್ರಗಳ ವಿಶೇಷ.

ರಾಜನ ಆಸ್ಥಾನದ ವೈಭವ, ಬೇಟೆಯ ಚಿತ್ರಗಳು, ಕಟ್ಟಡಗಳ ವಿನ್ಯಾಸ - ಇವು ಈ ಚಿತ್ರಗಳ ವಸ್ತು. ಪಕ್ಷಿಗಳು ಮತ್ತು ಪ್ರಾಣಿಗಳು, ಈ ಚಿತ್ರಗಳಲ್ಲಿರುವ ಜನಪ್ರಿಯ ವಿಷಯಗಳು. ಒಂದೇ ಚಿತ್ರವನ್ನು ಬರೆದು ಮುಗಿಸಲು ಹಲವು ಪಳಗಿದ ಚಿತ್ರಕಾರರು ಕೈಜೋಡಿಸಿದರು.

ಚಿತ್ರ ಕೃಪೆ: ಗೀತಿಕಾ ಜೈನ್ ಅವರ “ಬರ್ಡ್ಸ್ ಆಂಡ್ ಆನಿಮಲ್ಸ್  ಇನ್ ಇಂಡಿಯನ್ ಆರ್ಟ್” ಪುಸ್ತಕ