26)ಉತ್ತರ ಅಮೇರಿಕಾದ ಒಪಾಸಮ್ ತನ್ನ ಮರಿಗಳನ್ನು ಹೊಟ್ಟೆಯ ಸಂಚಿ (ಪೌಚ್)ಯಲ್ಲಿ ಹೊತ್ತೊಯ್ಯುತ್ತದೆ. ಹುಟ್ಟುವಾಗ ಇದರ ಮರಿಯ ತೂಕ ೧.೯ ಗ್ರಾಮ್. ಈ ಮರಿಗಳು ಪೂರ್ತಿ ಬೆಳೆದಿರುವುದಿಲ್ಲ. ಒಪಾಸಮ್‌ನ ಮರಿಗಳು ಸಂಚಿಯಲ್ಲಿ ಹುಟ್ಟುವುದಿಲ್ಲ; ಇನ್ನೂ ಕಣ್ಣು ಕಾಣಿಸದ ಸ್ಥಿತಿಯಲ್ಲಿರುವ ಅವು ತಮ್ಮ ಸಹಜಪ್ರವೃತ್ತಿಯಿಂದ ಅಮ್ಮನ ಸಂಚಿಯನ್ನು ಸೇರಿಕೊಳ್ಳುತ್ತವೆ. ಅನಂತರ ಹಲವಾರು ತಿಂಗಳು ಸಂಚಿಯಲ್ಲೇ ಉಳಿದು ಬೆಳೆಯುತ್ತವೆ.
27)ಅತಿ ದೊಡ್ಡ ಆಫ್ರಿಕನ್ ಆನೆಯ ತೂಕ ಏಳು ಟನ್ ಇದ್ದೀತು. ಇದು ಈಗ ನೆಲದಲ್ಲಿ ವಾಸಿಸುವ ಅತ್ಯಂತ ದೊಡ್ಡ ಸಸ್ತನಿ. (ಅದೇನಿದ್ದರೂ ಈ ಆನೆಯ ತೂಕ ಈಗ ತಾನೇ ಹುಟ್ಟಿದ ನೀಲಿ-ವೇಲ್‌ನ ತೂಕಕ್ಕೆ ಸಮ.) ನೆಲದಲ್ಲಿ ವಾಸ ಮಾಡಿದ ಅತ್ಯಂತ ದೊಡ್ಡ ಸಸ್ತನಿ ದೈತ್ಯ ಖಡ್ಗಮೃಗ; ಅದೀಗ ನಿರ್ವಂಶವಾಗಿದೆ. ಅದರ ಎತ್ತರ (ಭುಜ ಮಟ್ಟದಲ್ಲಿ) ೧೮ ಅಡಿ, ಮತ್ತು ತೂಕ ಸುಮಾರು ೧೩.೫ ಟನ್. (ಆದರೆ, ಅದರ ತೂಕ ವಯಸ್ಕ ನೀಲಿ-ವೇಲ್‌ನ್ ತೂಕದ ಹತ್ತನೆಯ-ಒಂದು ಭಾಗಕ್ಕೆ ಸಮ.)
28)ಕಾಡುಕೋಣಗಳ ಮಾರಣಹೋಮ: ೧೮೬೦ನೇ ದಶಕದ ಮಧ್ಯಭಾಗದಿಂದ ೧೮೮೩ರ ವರೆಗಿನ ಅವಧಿಯಲ್ಲಿ ಉತ್ತರ ಅಮೇರಿಕಾದಲ್ಲಿ ಕಾಡುಕೋಣಗಳ ಸಂಖ್ಯೆ ೧೩ ದಶಲಕ್ಷದಿಂದ ಸುಮಾರು ಐನೂರಕ್ಕೆ ಕುಸಿಯಿತು!
29)”ಬಫೆಲೋ ಬಿಲ್” ಕೋಡಿ ಎಂಬ ವ್ಯಕ್ತಿ ಸುಮಾರು ನಾಲ್ಕು ತಿಂಗಳ ಅವಧಿಯಲ್ಲಿ ೪,೮೬೨ ಕಾಡುಕೋಣಗಳನ್ನು ಕೊಂದೆನೆಂದು ಹೇಳಿಕೊಂಡಿದ್ದಾನೆ. ಇದೊಂದು ದಾಖಲೆ - ಮನುಷ್ಯನ ಕ್ರೂರತನದ ದಾಖಲೆ. ಆತ ಒಂದೇ ದಿನದಲ್ಲಿ ೬೯ ಕಾಡುಕೋಣಗಳನ್ನು ಕೊಂದು ಹಾಕಿದ್ದಾಗಿಯೂ ಜಂಭ ಕೊಚ್ಚಿಕೊಂಡಿದ್ದಾನೆ.
30)ಆಗಷ್ಟೇ ಹುಟ್ಟಿದ ಪಾಂಡಾದ ತೂಕವೆಷ್ಟು ಗೊತ್ತೇ? ಸುಮಾರು ೧೧೩ ಗ್ರಾಮ್. ಅದು ಇಲಿಗಿಂತಲೂ ಸಣ್ಣದಾಗಿರುತ್ತದೆ. (ಫೋಟೋ ನೋಡಿ)