46)ಆಸ್ಟ್ರೇಲಿಯಾದ ಕೋಲಾ ಕರಡಿಗಳು ಒಂದೇ ಒಂದು ಮರವನ್ನು ಅವಲಂಬಿಸಿ ಬದುಕುತ್ತವೆ - ಅದು ನೀಲಗಿರಿ ಮರ. ಅವುಗಳಿಗೆ ಬೇರೇನೂ ಬೇಕಾಗಿಲ್ಲ, ನೀರು ಕೂಡ ಬೇಕಾಗಿಲ್ಲ. ಈ ಭೂಮಿಯಲ್ಲಿ ಬದುಕಲಿಕ್ಕಾಗಿ, ಆಹಾರದ ಜೊತೆಗೆ ನೀರು ಅಗತ್ಯವಿಲ್ಲದ ಕೆಲವೇ ಕೆಲವು ಪ್ರಾಣಿಗಳಲ್ಲೊಂದು ಕೋಲಾ ಕರಡಿ.
47)ಮಧ್ಯ ಆಫ್ರಿಕಾದ ಡೆಮೋಕ್ರಾಟಿಕ್ ರಿಪಬ್ಲಿಕ್ ಆಫ್ ಕಾಂಗೋದ ಸಸ್ತನಿ ಒಕಾಪಿ ಒಂದು ವಿಚಿತ್ರ ಪ್ರಾಣಿ. ಇದನ್ನು ಕಾಡು ಜಿರಾಫೆ ಅಥವಾ ಜೀಬ್ರಾ ಜಿರಾಫೆ ಎಂದೂ ಕರೆಯುತ್ತಾರೆ. ಯಾಕೆಂದರೆ, ಇದರ ಕಾಲುಗಳಲ್ಲಿ ಜೀಬ್ರಾಕ್ಕೆ ಇರುವಂತೆ ಕಪ್ಪು-ಬಿಳಿ ಪಟ್ಟೆಗಳಿವೆ. ಇದರ ಎತ್ತರ ೧.೫ ಮೀ. (ಭುಜದ ಮಟ್ಟದಲ್ಲಿ) ಹಾಗೂ ತೂಕ ೨೦೦-೩೫೦ ಕಿ.ಗ್ರಾ. ಇದು ತನ್ನ ೧೮ ಇಂಚು (೪೬ ಸೆ.ಮೀ.) ಉದ್ದದ ನಾಲಗೆಯಿಂದ ತನ್ನ ಮುಖ, ಕಿವಿ, ಕಣ್ಣುಗಳನ್ನು ಸ್ವಚ್ಛ ಮಾಡಿಕೊಳ್ಳುತ್ತದೆ. ಅದೇ ನಾಲಗೆಯಿಂದ ತನ್ನ ಮೈ ಮೇಲೆ ಕೂರುವ ನೊಣಗಳನ್ನು ಓಡಿಸುತ್ತದೆ ಮತ್ತು ಮರಗಳ ಹಾಗೂ ಗಿಡಗಂಟಿಗಳ ಎಳೆಯ ಎಲೆಗಳನ್ನು ತಿನ್ನುತ್ತದೆ. ಇದು ಜಿರಾಫೆಯನ್ನು ಹೋಲುತ್ತದೆ; ಆದರೆ ಜಿರಾಫೆಗಿಂತ ಸಣ್ಣದು ಮತ್ತು ಇದರ ಕತ್ತು ಸಣ್ಣದು. (ಫೋಟೋ ನೋಡಿ)
48)ಜಾಕ್ ಮೊಲ ಅದ್ಭುತ ಲಾಂಗ್-ಜಂಪರ್. ಇದು ಅತಿ ವೇಗದಲ್ಲಿ ಓಡುತ್ತಾ ಒಂದೇಟಿಗೆ ೧೫ ಅಡಿ ಅಂತರ ಜಿಗಿಯುತ್ತದೆ!
49)ತನ್ನ ಮಕ್ಕಳಿಗೆ ಹಿಂಸೆ ಮಾಡುವುದು ಮನುಷ್ಯನೆಂಬ ಪ್ರಾಣಿ ಮಾತ್ರ ಎಂದುಕೊಂಡಿರಾ? ಅಲ್ಲ. ಯುಎಸ್ಎ ದೇಶದ ಅಟ್ಲಾಂಟಾ, ಜಾರ್ಜಿಯಾದ ಯೆರ್ಕ್ಸ್ ಪ್ರಾದೇಶಿಕ ಪ್ರೈಮೇಟ್ ಸಂಶೋಧನಾ ಕೇಂದ್ರದಲ್ಲಿ ನಡೆಸಿದ ಅಧ್ಯಯನಗಳಿಂದ ಗೊರಿಲ್ಲಾಗಳು ಕೂಡ ತಮ್ಮ ಮಕ್ಕಳಿಗೆ ಹಿಂಸೆ ಮಾಡುತ್ತವೆ ಎಂದು ತಿಳಿದು ಬಂದಿದೆ. ಅಲ್ಲಿದ್ದ ೧೭ ಗೊರಿಲ್ಲಾಗಳಲ್ಲಿ ಅಮ್ಮ-ಮಕ್ಕಳ ಸಂಬಂಧವನ್ನು ಅಧ್ಯಯನ ಮಾಡಿದಾಗ ಈ ಸಂಗತಿ ದಾಖಲಿಸಲಾಯಿತು. ಅಮ್ಮ ಗೊರಿಲ್ಲಾ ಮತ್ತು ಅದರ ಮಗುವನ್ನು ಮಾತ್ರ ಒಂದು ಗೂಡಿನಲ್ಲಿ ಕೂಡಿ ಹಾಕಿದಾಗ ಈ ವರ್ತನೆ ಯಾವಾಗಲೂ ಕಂಡು ಬಂತು. ಆದರೆ, ಅಮ್ಮ ಗೊರಿಲ್ಲಾಗಳು ತಮ್ಮ ಮರಿಗಳೊಂದಿಗೆ ಗುಂಪಿನಲ್ಲಿ ಇದ್ದಾಗ, ತಮ್ಮ ಮರಿಗಳನ್ನು ಪ್ರೀತಿಯಿಂದ ಪೋಷಣೆ ಮಾಡುತ್ತಿದ್ದವು.
50)ಗಂಡು ಆನೆ-ಸೀಲ್ ಪ್ರಾಣಿಗಳ ತಿಮಿ-ಮೇದಸ್ಸು (ಬ್ಲಬರ್) ಕೇವಲ ಏಳು ಇಂಚು ಉದ್ದವಿದೆ. ಅದರೆ ಅದರಿಂದ ೨೧೦ ಗ್ಯಾಲನ್ ಎಣ್ಣೆ ಸಿಗುತ್ತದೆ! ಈ ಎಣ್ಣೆಯು ಯಂತ್ರಗಳ ಚಾಲನೆಗೆ ಸ್ಪರ್ಮ್-ವೇಲ್ನ ಎಣ್ಣೆಗಿಂತಲೂ ಉತ್ತಮ.