7)ಭೂಮಿಯಲ್ಲಿರುವ ಒಟ್ಟು ನೀರಿನ ಶೇಕಡಾ ೧.೬ ಭಾಗ ಮಾತ್ರ ತಾಜಾ ಆಗಿದೆ! ಇದರ ಬಹುಪಾಲು ಹಿಮ ಮತ್ತು ಮಂಜುಗಡ್ದೆ ರೂಪದಲ್ಲಿ (ಜೀವಿಗಳು ಉಪಯೋಗಿಸಲು ಆಗದಂತೆ) ಭೂಮಿಯ ಉತ್ತರ ಹಾಗೂ ದಕ್ಷಿಣ ಧ್ರುವಗಳಲ್ಲಿ ಮತ್ತು ಅತಿ ಎತ್ತರದ ಪರ್ವತಗಳ ತುದಿಗಳಲ್ಲಿದೆ.
8)ಸಮುದ್ರ ತೀರಗಳ ಆಕಾರವನ್ನು ಅವಲಂಬಿಸಿ, ಸಮುದ್ರದ ಅಲೆಗಳ ಉಬ್ಬರ ಮತ್ತು ಇಳಿತಗಳ ಅಂತರ ಬದಲಾಗುತ್ತದೆ. ಲಾಳಿಕೆ ಆಕಾರದ ಬೇ ಆಫ್ ಫಂಡಿಯಲ್ಲಿ ಈ ಅಂತರ ೬೦ ಅಡಿ ಆಗಿದ್ದರೆ, ಬಹುಪಾಲು ಭೂಪ್ರದೇಶದಿಂದ ಆವರಿಸಲ್ಪಟ್ಟಿರುವ ಮೆಡಿಟರೇನಿಯನ್ ಸಮುದ್ರದಲ್ಲಿ ಈ ಅಂತರ ಕೆಲವೇ ಇಂಚುಗಳಷ್ಟು!
9)ದೊಡ್ಡ ಓಕ್ ಮರವು, ಬೆಳೆಯುವ ಹಂಗಾಮಿನಲ್ಲಿ, ೨೮,೦೦೦ ಗ್ಯಾಲನ್ ತೇವಾಂಶವನ್ನು ವಾತಾವರಣಕ್ಕೆ ಸೇರಿಸುತ್ತದೆ! (ಫೋಟೋ ನೋಡಿ)
10)ನೀರನಲ್ಲಿ ಕರಗದೆ ಇರುವ ವಸ್ತುವಿನ ರುಚಿ ಅಥವಾ ವಾಸನೆ ಗ್ರಹಿಸಲು ಮನುಷ್ಯರಿಗೆ ಸಾಧ್ಯವಿಲ್ಲ! ಒಣ ನಾಲಗೆಯಲ್ಲಿ ಸಕ್ಕರೆ ಹಾಕಿದರೆ, ಅದರ ರುಚಿಯೇನೆಂದು ತಿಳಿಯೋದಿಲ್ಲ. ಹಾಗೆಯೇ, ಒಣ ಮೂಗಿಗೆ ಹೂವಿನ ಪರಿಮಳ ಗ್ರಹಿಸಲಾಗದು. ಯಾವುದೇ ವಸ್ತುವಿನ ವಾಸನೆಯನ್ನು ಮೂಗು ಗ್ರಹಿಸಬೇಕಾದರೆ, ಆ ವಾಸನೆ ಗಾಳಿಯಲ್ಲಿ ತೇಲಿಕೊಂಡು ಬರಬೇಕು.
11)ಭೂಮಿಯಿಂದ ಆವೃತವಾದ ಅತಿ ದೊಡ್ಡ ನೀರಿನಾಸರೆ ಕ್ಯಾಸ್ಪಿಯನ್ ಸಮುದ್ರ. ಯುರೋಪಿನ ಅತಿ ದೊಡ್ದ ನದಿಯಾದ ವೋಲ್ಗಾ ಈ ಸಮುದ್ರಕ್ಕೆ ಸೇರಿಕೊಳ್ಳುತ್ತಿದೆ. ಈ ಸಮುದ್ರದ ವಿಸ್ತೀರ್ಣ ೧,೫೪,೦೦೦ ಚದರ ಮೈಲು. ಇದರಿಂದ ನೀರು ಹೊರಕ್ಕೆ ಹರಿಯೋದಿಲ್ಲ. ಆದ್ದರಿಂದ, ಇದರಲ್ಲಿ ಉಪ್ಪಿನಂಶ ಜಾಸ್ತಿಯಾಗುತ್ತಿದೆ. (ಇದರ ನೀರು ಇತರ ಸಮುದ್ರಗಳ ನೀರಿಗಿಂತ ಜಾಸ್ತಿ ಉಪ್ಪಾಗಿದೆ.) ಇದರ ನೀರಿನ ಮಟ್ಟವು ಶತಮಾನಗಳ ಕಾಲಮಾನದಲ್ಲಿ ಬದಲಾಗುತ್ತಿದೆ.
12)ತಟಸ್ಥವಾಗಿರುವ ನೀರಿನ ಉಷ್ಣತೆಯನ್ನು ಘನೀಭವನ ಬಿಂದುವಿಗಿಂತಲೂ ಬಹಳ ಕಡಿಮೆ ಮಾಡಲು ಸಾಧ್ಯ; ಆಗಲೂ ಅದು ದ್ರವದ ರೂಪದಲ್ಲೇ ಇರುತ್ತದೆ!