ಭಾರತೀಯ ಚಿತ್ರಕಲೆ - ಭಾಗ 7

ತಂಜಾವೂರು ಚಿತ್ರಕಲೆ
ತಮಿಳುನಾಡಿನ ತಂಜಾವೂರು ಈ ಚಿತ್ರಕಲೆಯ ಮೂಲ. ಆರಂಭದಲ್ಲಿ ಇವನ್ನು ಪ್ರಾರ್ಥನಾ ಕೋಣೆಗಳಲ್ಲಿ ಧಾರ್ಮಿಕ ಉದ್ದೇಶಗಳಿಗಾಗಿ ಬಳಸಲಾಗುತ್ತಿತ್ತು. ಆದರೆ ಈಗ ಇವು ಅಲಂಕಾರಿಕ ಚಿತ್ರಗಳಾಗಿಯೂ ಜನಪ್ರಿಯವಾಗಿವೆ.

ಈ ಚಿತ್ರಗಳು ಧಾರ್ಮಿಕ ವಿಷಯಕ್ಕೆ ಸಂಬಂಧಿಸಿದವುಗಳೇ ಆಗಿರುತ್ತವೆ. ಉದಾಹರಣೆಗೆ, ದಶಾವತಾರಗಳು, ಬೆಣ್ಣೆ ಕದಿಯುವ ಬಾಲಕೃಷ್ಣ ಇತ್ಯಾದಿ. ಇಲ್ಲಿರುವ ಚಿತ್ರ ಮಹಾಶಿವನ ವಾಹನ ನಂದಿಯದು.

ಮರದ ಹಲಗೆ ತುಂಡುಗಳಲ್ಲಿ ಸ್ಕೆಚ್ ಬರೆದು, ಕಲಾವಿದರು ಬಣ್ಣ ತುಂಬುತ್ತಾರೆ. ಅವನ್ನು ಅಂದಗೊಳಿಸಲು ಬಣ್ಣದ ಕಲ್ಲುಗಳು, ಆಭರಣಗಳು ಮತ್ತು ಗಾಜಿನ ತುಂಡುಗಳನ್ನು ಬಳಸುತ್ತಾರೆ. ಚಿತ್ರಗಳ ಕಂಬಗಳು, ಮಾಲೆಗಳು ಮತ್ತು ಆಭರಣಗಳಿಗೆ ಚಿನ್ನದ ತಗಡನ್ನು ತಗಲಿಸಿ ಚಿತ್ರಗಳನ್ನು ಆಕರ್ಷಕವಾಗಿಸುತ್ತಾರೆ.

ಚಿತ್ರ ಕೃಪೆ: ಗೀತಿಕಾ ಜೈನ್ ಅವರ “ಬರ್ಡ್ಸ್ ಆಂಡ್ ಆನಿಮಲ್ಸ್  ಇನ್ ಇಂಡಿಯನ್ ಆರ್ಟ್” ಪುಸ್ತಕ