ನಮ್ಮ ಹೆಮ್ಮೆಯ ಭಾರತ (9 - 10)

Constitution of India - First Statements

೯.ಜಗತ್ತಿನ ಬೃಹತ್ ಪ್ರಜಾಪ್ರಭುತ್ವ ಭಾರತ
ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವವಾದ ಭಾರತದ ಸಂವಿಧಾನ ೨೬ ಜನವರಿ ೧೯೫೬ರಲ್ಲಿ ಜ್ಯಾರಿಯಾಯಿತು. ಕೇಂದ್ರ ಸರಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಕ್ಕೂಟವನ್ನು ಆಳುತ್ತಿದೆ. ಸಂವಿಧಾನದ ಅನುಸಾರ, ಕೇಂದ್ರ ಸರಕಾರ ಮತ್ತು ರಾಜ್ಯಗಳ ನಡುವೆ ಅಧಿಕಾರ ಹಂಚಿಕೆಯಾಗಿದೆ. ಭಾರತದ ರಾಜಧಾನಿ ನವದೆಹಲಿ.

೧೦.ಭಾರತದ ಅಸಾಧಾರಣ ಚುನಾವಣೆಗಳು
ಭಾರತದಲ್ಲಿ ಐದು ವರುಷಗಳಿಗೊಮ್ಮೆ ಸಾರ್ವಜನಿಕ ಚುನಾವಣೆಗಳು ಜರಗುತ್ತವೆ. ಭಾರತದ ಸಂಸತ್ತು ಲೋಕಸಭೆ (ಮೇಲ್ಮನೆ) ಮತ್ತು ರಾಜ್ಯಸಭೆ (ಕೆಳಮನೆ)ಗಳನ್ನು ಒಳಗೊಂಡಿದೆ. ಲೋಕಸಭೆಯ ಸದಸ್ಯರನ್ನು (ಇಬ್ಬರ ಹೊರತಾಗಿ) ಮತದಾರರು ಚುನಾವಣೆ ಮೂಲಕ ನೇರವಾಗಿ ಚುನಾಯಿಸುತ್ತಾರೆ. ಆ ಇಬ್ಬರನ್ನು ರಾಷ್ಟ್ರಪತಿಯವರು ನಾಮಕರಣ ಮಾಡುತ್ತಾರೆ. ಸರಕಾರದ ಮುಖ್ಯಸ್ಥರಾದ ಪ್ರಧಾನಮಂತ್ರಿಯವರನ್ನು ಲೋಕಸಭೆಯ ಸದಸ್ಯರು ಆಯ್ಕೆ ಮಾಡುತ್ತಾರೆ.

ರಾಜ್ಯಸಭೆಯ ಸದಸ್ಯರನ್ನು ರಾಜ್ಯಗಳ ವಿಧಾನಸಭೆಗಳ ಚುನಾಯಿತ ಸದಸ್ಯರು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳು ಚುನಾಯಿಸುತ್ತಾರೆ.

೨೦೨೧ರಲ್ಲಿ ಭಾರತದ ಜನಸಂಖ್ಯೆ ಸುಮಾರು ೧೩೯ ಕೋಟಿ. ಭಾರತದ ೨೦೧೯ರ ಲೋಕಸಭೆಯ ಮಹಾಚುನಾವಣೆಯಲ್ಲಿ ಮತದಾರರ ಸಂಖ್ಯೆ ೧೦೦ ಕೋಟಿಗಿಂತ ಅಧಿಕ. ಇದು ಯುರೋಪಿಯನ್ ಯೂನಿಯನ್ ಮತ್ತು ಯುಎಸ್‌ಎ ದೇಶದ ಮತದಾರರ ಒಟ್ಟು ಸಂಖ್ಯೆಗಿಂತ ಜಾಸ್ತಿ.

ಫೋಟೋ: ಭಾರತದ ಸಂವಿಧಾನದ ಆರಂಭದ ವಾಕ್ಯಗಳು