೧೩.ಭಾರತದ ಪಾರಂಪರಿಕ ಸ್ಥಳಗಳು ವಿಶ್ವವಿಖ್ಯಾತ
ಭಾರತದ ಸಂಪನ್ನ ಸಾಂಸ್ಕೃತಿಕ ಪರಂಪರೆ ಮತ್ತು ಪಾರಂಪರಿಕ ಸ್ಥಳಗಳು ನಮ್ಮ ಹೆಮ್ಮೆ. ಯುನೆಸ್ಕೋ ಸಂಸ್ಥೆಯ ೧೯೭೨ರ ಜಾಗತಿಕ ಪಾರಂಪರಿಕ ನಡಾವಳಿ ಅನುಸಾರ ಗುರುತಿಸಲಾದ ಸಾಂಸ್ಕೃತಿಕವಾಗಿ ಅಥವಾ ಪ್ರಾಕೃತಿಕವಾಗಿ ಪ್ರಾಮುಖ್ಯವಾದ ಸ್ಥಳಗಳೇ “ಪಾರಂಪರಿಕ ಸ್ಥಳಗಳು.”
ಭಾರತದಲ್ಲಿ ೩೦ ಜಾಗತಿಕ ಪಾರಂಪರಿಕ ಸ್ಥಳಗಳಿವೆ; ಇವುಗಳಲ್ಲಿ ೨೪ ಸಾಂಸ್ಕೃತಿಕ ಸ್ಥಳಗಳು, ಉಳಿದವು ಪಾಕೃತಿಕ ಸ್ಥಳಗಳು. ಅಜಂತಾ ಮತ್ತು ಎಲ್ಲೋರಾ ಗುಹೆಗಳು, ತಾಜಮಹಲ್, ಕೊನಾರ್ಕದ ಸೂರ್ಯ ದೇವಾಲಯ, ಎಲಿಫೆಂಟಾ ಗವಿಗಳು, ಬಿಹಾರದ ಬೋಧಗಯಾದ ಮಹಾಬೋಧಿ ದೇವಾಲಯ ಇವುಗಳಲ್ಲಿ ಕೆಲವು ಪ್ರಮುಖ ಸ್ಥಳಗಳು.
ಇವುಗಳಲ್ಲಿ ಕೆಲವು ಸ್ಥಳಗಳಿಗಾದರೂ ಭೇಟಿ ನೀಡಿದರೆ “ಭಾರತವೆಂಬ ಅದ್ಭುತ”ದ ಕಿರು ಪರಿಚಯ ನಮಗಾಗುತ್ತದೆ.
ಫೋಟೋ: ಮಹಾಬೋಧಿ ದೇವಾಲಯ