ನಮ್ಮ ಹೆಮ್ಮೆಯ ಭಾರತ (12)

Unity in Diversity - Symbolic Image

೧೨.ಭಾರತದ “ವಿವಿಧತೆಯಲ್ಲಿ ಏಕತೆ" ಜಗತ್ತಿಗೇ ಮಾದರಿ
ದೊಡ್ಡ ದೇಶ ಭಾರತದ ಜನಸಂಖ್ಯೆ ೨೦೧೭ರಲ್ಲಿ ೧೩೭ ಕೋಟಿ. ವಿವಿಧತೆ ನಮ್ಮ ಭಾರತದ ವಿಶೇಷತೆ. ತೀವ್ರ ಉಷ್ಣತೆಯಿಂದ ತೊಡಗಿ ತೀವ್ರ ಚಳಿಯ ವರೆಗೆ ಇಲ್ಲಿನ ಹವಾಮಾನ ವಿಭಿನ್ನ. ಭೌಗೋಳಿಕವಾಗಿ, ಪರ್ವತಗಳಿಂದ ಮರುಭೂಮಿಗಳ ವರೆಗೆ ಮತ್ತು ಸಮುದ್ರತೀರಗಳಿಂದ ಮಳೆಕಾಡುಗಳ ವರೆಗೆ ಇಲ್ಲಿನ ಪ್ರದೇಶಗಳು ವಿಭಿನ್ನ.

ಸಾವಿರಾರು ಜನಸಮುದಾಯಗಳು, ೭೮೦ ಭಾಷೆಗಳು ಮತ್ತು ಉಪಭಾಷೆಗಳು, ಹಲವಾರು ಉಡುಗೆಗಳು, ಅನೇಕ ಧರ್ಮಗಳು, ಹಲವು ಸಂಪ್ರದಾಯಗಳು, ಆಚರಣೆಗಳು, ಕಟ್ಟುಕಟ್ಟಳೆಗಳು ಇಲ್ಲಿ ವ್ಯಾಪಿಸಿವೆ.

ಅದೇನಿದ್ದರೂ ಭಾರತೀಯರಲ್ಲಿ ಅದ್ಭುತ ಐಕ್ಯತೆಯಿದೆ. ಪಾರಂಪರಿಕ ಬದುಕು ವಿವಿಧತೆಯಲ್ಲಿ ಏಕತೆಯನ್ನು ನಮಗೆ ಕಲಿಸಿದೆ. ನಾಗರಿಕತೆಯ ಆರಂಭದಿಂದ ತಲೆಮಾರಿನಿಂದ ತಲೆಮಾರಿಗೆ ದಾಟಿ ಬಂದಿರುವ ಸಹಜೀವನಕ್ಕೆ ಅಗತ್ಯವಾದ ಮೌಲ್ಯಗಳೇ ಇದರ ಭದ್ರ ಬುನಾದಿ.