ನಮ್ಮ ಹೆಮ್ಮೆಯ ಭಾರತ (ಭಾಗ 68)

ISRO - 100th Mission

೬೮.ಭಾರತದ ಬಾಹ್ಯಾಕಾಶ ಸಾಧನೆಗಳ ಹೆಮ್ಮೆಯ ಸಂಸ್ಥೆ “ಇಸ್ರೋ”
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಒಂದಾದ ಮೇಲೊಂದರಂತೆ ಸಾಧನೆಗಳನ್ನು ಮಾಡುತ್ತಾ, ಬಾಹ್ಯಾಕಾಶದಲ್ಲಿ ದಿಟ್ಟ ಹೆಜ್ಜೆಗಳನ್ನಿಡುತ್ತಿದೆ. ಎಪ್ರಿಲ್ ೨೦೦೮ರಲ್ಲಿ, ಇಸ್ರೋದ ಪೋಲಾರ್ ರಾಕೆಟ್ (ಪಿಎಸ್‌ಎಲ್‌ವಿ - ಸಿ೯)  ಒಂದೇ ಜಿಗಿತದಲ್ಲಿ ಹತ್ತು ಉಪಗ್ರಹಗಳನ್ನು ಬಾಹ್ಯಾಕಾಶದ ಕಕ್ಷೆಗೆ ಏರಿಸಿದ್ದು ಅಭೂತಪೂರ್ವ ಜಾಗತಿಕ ದಾಖಲೆ. ೨೦೧೭ರ ಇಸ್ರೋದ ಸಾಧನೆಯಂತೂ ಜಗತ್ತನ್ನೇ ನಿಬ್ಬೆರಗಾಗಿಸಿತು; ರಾಕೆಟಿನ ಒಂದೇ ಜಿಗಿತದಲ್ಲಿ, ಕೇವಲ ೧೮ ನಿಮಿಷಗಳಲ್ಲಿ ೧೦೪ ಕೃತಕ ಉಪಗ್ರಹಗಳನ್ನು ಇಸ್ರೋ ಕಕ್ಷೆಗೆ ಏರಿಸಿತು!
ಫೋಟೋ: ಇಸ್ರೋದಿಂದ ಉಪಗ್ರಹಗಳ ಉಡಾವಣೆ - ೧೦೦ನೇ ಮಿಷನ್