೫೯.ಅತ್ಯಧಿಕ ಸಂಖ್ಯೆಯ ಕುಶಲ ವೃತ್ತಿಪರರು - ಭಾರತದ ಹೆಗ್ಗಳಿಕೆ
ಭಾರತೀಯರಿಗೆ ತಮ್ಮ ಮಗ ಅಥವಾ ಮಗಳು ಡಾಕ್ಟರ್, ಇಂಜಿನಿಯರ್, ಕಂಪ್ಯೂಟರ್ ಪರಿಣತ, ವಿಜ್ನಾನಿ ಅಥವಾ ಚಾರ್ಟರ್ಡ್ ಅಕೌಂಟೆಂಟ್ ಆಗಬೇಕೆಂಬ ಕನಸು.
ಇದಕ್ಕೆ ಪೂರಕವಾಗಿ ಭಾರತದಲ್ಲಿವೆ ಜಗತ್ತಿನ ಅತ್ಯಧಿಕ ಸಂಖ್ಯೆಯ ವಿಶ್ವವಿದ್ಯಾಲಯಗಳು; ಕೆಲವು ವಿಶ್ವವಿದ್ಯಾಲಯಗಳು ಜಗತ್ತಿನ ಶ್ರೇಷ್ಠ ವಿದ್ಯಾಸಂಸ್ಥೆಗಳೆಂದು ಗುರುತಿಸಲ್ಪಟ್ಟಿವೆ. ಉದಾಹರಣೆಗೆ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸಯನ್ಸ್. ಇದರಿಂದಾಗಿ, ಒಂಭತ್ತು ಶೈಕ್ಷಣಿಕ ವಿಭಾಗಗಳಲ್ಲಿ, ಜಗತ್ತಿನಲ್ಲಿ ಅತ್ಯಧಿಕ ಸಂಖ್ಯೆಯ ವೃತ್ತಿಪರರನ್ನು ಹೊಂದಿರುವ ದೇಶಗಳಲ್ಲಿ ಭಾರತಕ್ಕೆ (ಯುಎಸ್‌ಎ ದೇಶದ ನಂತರ) ಎರಡನೆಯ ಸ್ಥಾನ.
ಆ ಶೈಕ್ಷಣಿಕ ವಿಭಾಗಗಳು: ಕಂಪ್ಯೂಟರ್ ಸಾಫ್ಟ್-ವೇರ್, ಗಣಿತ, ಇಂಟರ್ ಪರ್ಸನಲ್ ಕಮ್ಯೂನಿಕೇಷನ್, ಕಂಪ್ಯೂಟರ್ ಹಾರ್ಡ್-ವೇರ್, ಫೈನಾನ್ಸ್, ಆರೋಗ್ಯಸೇವೆ, ಮಾಹಿತಿ ತಂತ್ರಜ್ನಾನ, ಭಾಷೆಗಳು ಮತ್ತು ಸಂವಹನ, ಮೆನೇಜ್‌ಮೆಂಟ್ ಮತ್ತು ಆಫೀಸ್ ಕೌಶಲ್ಯಗಳು.
ಫೋಟೋ: ಪದವೀದಾನ ಸಮಾರಂಭದಲ್ಲಿ ಪದವೀಧರರ ಸಂಭ್ರಮ