ADDOOR

AGRICULTURE, RURAL DEVELOPMENT

ಜಲಜಾಗೃತಿ(28) ಹಳ್ಳಿಗೆ ನೀರು ತಂದ ಮಹಿಳೆಯರು
ಬೆಂಗಳೂರಿನವರು ಪುಣ್ಯವಂತರು! ಮಂಗಳೂರಿನವರೂ ಪುಣ್ಯವಂತರು! ಯಾಕೆಂದರೆ ಮನೆಯ ನಳ್ಳಿ ತಿರುಗಿಸಿದರೆ ನೀರು ಬರುತ್ತದೆ, ಅಲ್ಲವೇ? ಬೆಂಗಳೂರಿನ ಮನೆಮನೆಗಳಿಗೆ ನೀರು ತರಲಿಕ್ಕಾಗಿ ಕಾವೇರಿಯಿಂದ ಕುಡಿಯುವ ನೀರು ಸರಬರಾಜು ಮಹಾಯೋಜನೆಯ ವಿವಿಧ ಹಂತಗಳಿಗಾಗಿ...
Read more
ಜಲಜಾಗೃತಿ(27) ಶಾಲಾಮಕ್ಕಳಿಂದ ಜಲಜಾಗೃತಿ
"ಅದು ನನ್ನ ನೀರಿನ ಟ್ಯಾಂಕ್. ಅದರಿಂದ ಏನು ಬೇಕಾದರೂ ಮಾಡಿಕೊಳ್ತೇನೆ. ಅದನ್ನು ಕೇಳಲಿಕ್ಕೆ ನೀವ್ಯಾರು?""ನಾನು ಯಾರಂತ ಗೊತ್ತುಂಟಾ? ನನ್ನ ಟ್ಯಾಂಕ್ ಮೊದಲು ಭರ್ತಿ ಆಗಬೇಕು. ಇಲ್ಲಾಂದ್ರೆ ನಿಮ್ಮ ಟ್ಯಾಂಕಿಗೆ ಬೆಂಕಿ ಕೊಡ್ತೇನೆ."ಇದನ್ನು ಹೇಳಿದವರು...
Read more
ಜಲಜಾಗೃತಿ(26) ಮಂಗಳೂರಿನ ನೀರಿನ ಬಿಲ್‍ಗಳ "ಸುದ್ದಿ"
ಮಂಗಳೂರು ಮಹಾನಗರಪಾಲಿಕೆಯ ೨೦೦೯-೧೦ರ ಬಜೆಟನ್ನು ೨೮ ಜೂನ್ ೨೦೦೯ರಂದು ಮಂಡಿಸಲಾಯಿತು. ಇದರಲ್ಲಿ ಮಂಗಳೂರಿನ ನೀರು ಬಳಕೆದಾರರಿಗೆ ವಿಧಿಸುವ ನೀರಿನ ಶುಲ್ಕದಿಂದ ಸಂಗ್ರಹವಾಗುವ ಆದಾಯ ರೂಪಾಯಿ ೨೮.೫ ಕೋಟಿ ಎಂದು ಅಂದಾಜಿಸಲಾಗಿದೆ. (ಈ ಸಾಲಿನ ಪಾಲಿಕೆಯ ಒ...
Read more
ಜಲಜಾಗೃತಿ(25) ನೀರುಳಿಸುವ ಪಾಠ ಮನೆಯಲ್ಲೇ ಶುರುವಾಗಲಿ
ಹೈದರಾಬಾದಿಗೆ ಹೋಗಿದ್ದಾಗ, ಮಹಾನಗರದ ಕೇಂದ್ರ ಭಾಗದಲ್ಲಿದ್ದ ಹೋಟೆಲಿನಲ್ಲಿ ತಂಗಿದ್ದೆ. ಅಲ್ಲಿಯ ಬಾತ್‍ರೂಂನ ಬೇಸಿನ್‍ನ ಮೇಲ್ಗಡೆ ಗೋಡೆಯಲ್ಲಿ ದೊಡ್ಡ ಕನ್ನಡಿ. ಅದರ ಪಕ್ಕದಲ್ಲಿ ಕಣ್ಣಿಗೆ ರಾಚುವಂತೆ ಒಂದು ಭಿತ್ತಿಪತ್ರ.ಆ ಭಿತ್ತಿಪತ್ರದಲ್ಲಿದ್ದ ಮಾ...
Read more
ಜಲಜಾಗೃತಿ(24) ನೀರಿಂಗಿಸಿದರೆ ಸಾಲದು, ಮಣ್ಣಿನ ಸಾವಯವಾಂಶ ಹೆಚ್ಚಿಸಬೇಕು
ಚಿಕ್ಕಮಗಳೂರಿನಿಂದ ಕೆ.ಬಿದರೆಗೆ ಬಸ್ಸಿನಲ್ಲಿ ಎರಡೂವರೆ ಗಂಟೆಗಳ ಪ್ರಯಾಣ. ಕಡೂರಿನಲ್ಲಿ ಬಸ್ ಬದಲಾಯಿಸಿ ಅಂದು ಕೆ.ಬಿದರೆ ತಲಪಿದಾಗ ಬಿಸಿಲೇರುತ್ತಿತ್ತು. ಹಿರಿಯರಾದ ಟಿ.ಬಿ. ಕುಮಾರಪ್ಪ ನಮಗಾಗಿ ಕಾದಿದ್ದರು.ಅಲ್ಲಿ ಕುಮಾರಪ್ಪನವರದು ೨೭ ಎಕ್ರೆಗಳ ತೆ...
Read more
ಜಲಜಾಗೃತಿ(23) ಕುಡಿಯುವ ನೀರಿಗಾಗಿ ಜಗಳ - ಕೊಲೆಯಲ್ಲಿ ಅವಸಾನ
ನೀರಿಗಾಗಿ ಪರದಾಟದ ಕತೆಗಳನ್ನು ಕೇಳಿದ್ದೇವೆ; ಹೋರಾಟದ ಕತೆಗಳನ್ನೂ ಕೇಳಿದ್ದೇವೆ. ನೀರಿಗಾಗಿ ಕೊಲೆ ಮಾಡಿದ ಕತೆ ಗೊತ್ತೇ?ಈ ಕರಾಳ ಪ್ರಕರಣ ನಡೆದದ್ದು ಭೋಪಾಲದ ಷಹಜೇಹಾನ್‍ಬಾದ್ ಪ್ರದೇಶದಲ್ಲಿ, ೧೩ ಮೇ ೨೦೦೯ರಂದು. ಅಲ್ಲಿನ ಸಂಜಯನಗರ ಬಸ್ತಿಯಲ್ಲಿ ಕುಡ...
Read more