ಹೀಗೂ ಉಂಟೇ! ಪ್ರಾಣಿ ಪ್ರಪಂಚ (ಭಾಗ 7)
31)ಪ್ರಾಚೀನ ಈಜಿಪ್ಟಿನಲ್ಲಿ, ಹಮದ್ರ್ಯಾಸ್ ಬಬೂನ್‌ಗಳು (ಆಫ್ರಿಕಾ ಮತ್ತು ದಕ್ಷಿಣ ಏಷ್ಯಾದಲ್ಲಿ ವಾಸಿಸುವ, ನಾಯಿಯ ಮುಖವಿರುವ ದೊಡ್ಡ ಮಂಗ) ತೊತ್ ದೇವರ ಜೊತೆಗಾರರೆಂದು ನಂಬುತ್ತಿದ್ದರು. ಆದ್ದರಿಂದ ಅವು ಸತ್ತಾಗ ಅವನ್ನು ಮಮ್ಮಿಗಳಾಗಿ ರಕ್ಷಿಸುತ್ತಿದ್ದರು!
32)ಬಾಯಿಯಲ್ಲೇ ಮರಿ ಬೆಳೆಸುವ ಕಪ್ಪೆ ಒಂದು ವಿಸ್ಮಯ. ಇದರ ಪ್ರಾಣಿಶಾಸ್ತ್ರೀಯ ಹೆಸರು ರೈನೋಡರ್ಮಾ ಡಾರ್-ವಿನಿ. ಗಂಡು ಕಪ್ಪೆಯು ತನ್ನ ಬಾಯಿಯ ಸಂಚಿ (ಪೌಚ್)ಯಲ್ಲಿ ಸಣ್ಣ ಮರಿಗಳನ್ನು ಸಾಕುತ್ತದೆ. ಹೆಣ್ಣು ಕಪ್ಪೆ ಇಟ್ಟ ಮೊಟ್ಟೆಗಳಿಂದ ಮರಿಗಳು ಹೊರಬರುವ ಸಮಯದಲ್ಲಿ, ಯಾವುದೇ ಗಂಡು ಕಪ್ಪೆ (ಅಪ್ಪ ಕಪ್ಪೆಯೇ ಆಗಿರಬೇಕೆಂದಿಲ್ಲ.) ಹಲವಾರು ಮರಿಗಳನ್ನು ಎತ್ತಿಕೊಂಡು, ತನ್ನ ಬಾಯಿಯ ಸಂಚಿಯೊಳಗೆ ಹಾಕಿಕೊಳ್ಳುತ್ತದೆ. ಈ ಮರಿಗಳು ಕಪ್ಪೆಗಳಾಗಿ ಬೆಳೆಯುವ ತನಕ ಆ ಸಂಚಿಯಲ್ಲೇ ಇರುತ್ತವೆ! ಚಾರ್ಲ್ಸ್ ಡಾರ್ವಿನ್ ಪತ್ತೆ ಮಾಡಿದ ಕಾರಣ ಅವರ ನೆನಪಿಗಾಗಿ ಈ ಹೆಸರನ್ನಿಡಲಾಗಿದೆ. ಭೂಮಿಯಲ್ಲಿ ಈ ರೀತಿಯಲ್ಲಿ ಮರಿ ಬೆಳೆಸುವ ಬೇರೆ ಯಾವುದೇ ಜೀವಿ ಇಲ್ಲ. (ಫೋಟೋ ನೋಡಿ)
33)ಬೇರೆಬೇರೆ ವಿಧದ ಪೋಲಿಯೋ ವೈರಾಣುಗಳ ಪತ್ತೆಗಾಗಿ ಮೂರು ವರುಷ ಕಾಲ ನಡೆಸಿದ ಬೃಹತ್ ಸಂಶೋಧನೆಯಲ್ಲಿ ಮೂವತ್ತು ಸಾವಿರ ಮಂಗಗಳನ್ನು ಬಳಸಲಾಗಿತ್ತು.
34)ಚಟುವಟಿಕೆ ಮತ್ತು ಪ್ರತಿಫಲದ ಜೊತೆ ೨೫ ಸೆಕೆಂಡುಗಳ ತನಕ ಸಂಬಂಧ ಕಲ್ಪಿಸಲು ಇಲಿಗೆ ಸಾಧ್ಯ. ಒಂದು ಸನ್ನೆಯನ್ನು ಒತ್ತುವುದು ಮತ್ತು ಆಹಾರದ ಚೂರು ಪಡೆಯುವುದು - ಇವುಗಳ ನಡುವಣ ಸಮಯ ಮೂವತ್ತು ಸೆಕೆಂಡು ದಾಟಿದರೆ ಇಲಿಗೆ ಗೊಂದಲವಾಗುತ್ತದೆ.
35)ರಷ್ಯಾದಲ್ಲಿ ಕಬ್ಬಿಣದ ಸಲ್ಫೈಡ್ ಇರುವ ಅದಿರು ನಿಕ್ಷೇಪಗಳನ್ನು ವಾಸನೆಯ ಮೂಲಕ ಪತ್ತೆ ಮಾಡಲು ನಾಯಿಗಳಿಗೆ ತರಬೇತಿ ನೀಡಲಾಗಿದೆ.
Related Articles
November 06, 2016
November 06, 2016
November 06, 2016